ಬದಿಯಡ್ಕ: ಬೂತ್ ಮಟ್ಟದಿಂದ ವಾರ್ಡುಮಟ್ಟದ ವರೆಗೆ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪಕ್ಷಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ರಾಮ ಪಾಟಾಳಿಯರು ಜನಮೆಚ್ಚಿದ ನಾಯಕ. ಅವರ ತ್ಯಾಗದ ಫಲವಾಗಿ ಪಕ್ಷವು ಬದಿಯಡ್ಕದಲ್ಲಿ ಭದ್ರವಾಗಿ ನೆಲೆಯೂರಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಅಭಿಪ್ರಾಯಪಟ್ಟರು.
ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಶುಕ್ರವಾರ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ.ರಾಮ ಪಾಟಾಳಿಯವರ 5ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ದೀಪಬೆಳಗಿಸಿ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ಎಲ್ಲಾ ವಲಯಗಳಲ್ಲಿ ಪಕ್ಷಕ್ಕಾಗಿ ದುಡಿದ ಧೀಮಂತ ವ್ಯಕ್ತಿ ರಾಮ ಪಾಟಾಳಿಯವರಾಗಿದ್ದರು ಎಂದರು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಪ್ರಭಾಕರನ್, ಪಿ.ಜಿ.ಚಂದ್ರಹಾಸ ರೈ, ತಿರುಪತಿ ಕುಮಾರ ಭಟ್, ಶಾಫಿ ಗೋಳಿಯಡ್ಕ, ಖಾದರ್ ಮಾನ್ಯ, ಜಗನ್ನಾಥ ರೈ, ಅನಸೂಯ, ರಾಮ ಪಟ್ಟಾಜೆ, ಕೃಷ್ಣಕುಮಾರ್, ಶ್ರೀನಾಥ್, ಲೆಫ್ಟಿಥೋಮಸ್, ರಾಮಕೃಷ್ಣ, ಕುಮಾರನ್ ನಾಯರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ನಿರಂಜನ ರೈ ಬದಿಯಡ್ಕ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಲೋಹಿತಾಕ್ಷನ್ ನಾಯರ್ ವಂದಿಸಿದರು. ರಾಮ ಪಾಟಾಳಿಯವರ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.