HEALTH TIPS

ತುಂಬಾ ಉಪಯುಕ್ತವಾಗಿವೆ ವಾಟ್ಸ್​ಆಯಪ್​ನ ಈ 5 ಟ್ರಿಕ್ಸ್: ನಿಮ್ಮ ಕೆಲಸವನ್ನು ಕ್ಷಣಾರ್ಧದಲ್ಲಿ ಮುಗಿಸುತ್ತದೆ

 ವಾಟ್ಸ್​ಆಯಪ್ ಇತ್ತೀಚಿನ ದಿನಗಳಲ್ಲಿ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಇದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಈ ಮೂಲಕ ನಮ್ಮ ಅನೇಕ ಕೆಲಸವನ್ನು ಸುಲಭಗೊಳಿಸುತ್ತದೆ. ವಾಟ್ಸ್​ಆಯಪ್ ಕಾಲಕ್ಕೆ ಅನುಗುಣವಾಗಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇರುತ್ತದೆ.

ಇಂದು ನಾವು ನಿಮಗೆ ಕೆಲವೊಂದು ಟ್ರಿಕ್ಸ್ ಬಗ್ಗೆ ಹೇಳುತ್ತೇವೆ. ಇದನ್ನು ಉಪಯೋಗಿಸಿದ ಬಳಿಕ ವಾಟ್ಸ್​ಆಯಪ್ ನಿಮಗೆ ಮತ್ತಷ್ಟು ಸ್ನೇಹಿ ಎನಿಸಲಿದೆ.

ಕೆಲವೊಮ್ಮೆ ವಾಟ್ಸ್​ಆಯಪ್​ನಲ್ಲಿ ಅಗತ್ಯ ಮೆಸೇಜ್​ಗಳು ತಪ್ಪಾಗಿ ಡಿಲೀಟ್ ಆಗುತ್ತವೆ. ಹಾಗಾದಾಗ ಇದನ್ನು ರಿಕವರಿ ಮಾಡಲು ಒಂದು ವೈಶಿಷ್ಟ್ಯವಿದ್ದು, ಅದರ ಸಹಾಯದಿಂದ ನೀವು ಅಳಿಸಿದ ಸಂದೇಶಗಳನ್ನು ಮರುಪಡೆಯಬಹುದು. ಇದಕ್ಕಾಗಿ ನೀವು ವಾಟ್ಸ್​ಆಯಪ್​ನ ಬ್ಯಾಕಪ್ ಅನ್ನು ಮರುಸ್ಥಾಪಿಸಬೇಕು.

ನಿಮ್ಮ ವೈಯಕ್ತಿಕ ಚಾಟ್ ಅನ್ನು ಬೇರೆ ಯಾರೂ ಓದಬಾರದು ಎಂದು ನೀವು ಬಯಸಿದರೆ, ಚಾಟ್ ಅನ್ನು ಲಾಕ್ ಮಾಡಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಿಗೆ ಹೋಗಿ ಚಾಟ್ ಲಾಕ್ ಆಯ್ಕೆಯನ್ನು ಆರಿಸಬೇಕಾಗುತ್ತದೆ. ನೀವು ಬಯಸಿದರೆ, ನಂತರ ಚಾಟ್ ಅನ್ನು ಅನ್ಲಾಕ್ ಕೂಡ ಮಾಡಬಹುದು.

ಈ ವೈಶಿಷ್ಟ್ಯವು ಇನ್​ಸ್ಟಾಗ್ರಾಮ್​ ಸ್ಟೋರಿಗೆ ಹೋಲುತ್ತದೆ. ನಿಮ್ಮ ದೈನಂದಿನ ಚಟುವಟಿಕೆಗಳು, ಫೋಟೋಗಳು ಮತ್ತು ವಿಡಿಯೋಗಳ ಮೂಲಕ ನೀವು ಸ್ಟೇಟಸ್ ಹಂಚಿಕೊಳ್ಳಬಹುದು. ಇದನ್ನು ನೀವು ಎಲ್ಲರಿಗೂ ಕಾಣುವಂತೆ ಅಥವಾ ನಿಮ್ಮ ಕಾಂಟೆಕ್ಟ್​ನಲ್ಲಿ ಇರುವವರಿಗೆ ಮಾತ್ರ ಅಥವಾ ನಿರ್ದಿಷ್ಟ ಜನರಿಗೆ ಮಾತ್ರ 24 ಗಂಟೆಗಳ ಕಾಲ ಕಾಣುವಂತೆ ಹಂಚಿಕೊಳ್ಳಬಹುದು. ಜೊತೆಗೆ ವಾಟ್ಸ್​ಆಯಪ್​ನಿಂದಲೇ ಸ್ಟೇಟಸ್ ಅನ್ನು ಫೇಸ್​ಬುಕ್​ಗೂ ಶೇರ್ ಮಾಡಬಹುದು.

ವಾಟ್ಸ್​ಆಯಪ್ ಪೇ ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ನೀವು ಸುಲಭವಾಗಿ ಹಣವನ್ನು ಕಳುಹಿಸಬಹುದು. ಈ ವೈಶಿಷ್ಟ್ಯವು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದಕ್ಕಾಗಿ ನೀವು UPI ಅನ್ನು ಆಯಡ್ ಮಾಡಬೇಕಷ್ಟೆ. ಬಳಿಕ ನೀವು ತಕ್ಷಣ ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು.

ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿಯೂ ನೀವು ವಾಟ್ಸ್​ಆಯಪ್ ಅನ್ನು ಬಳಸಬಹುದು. ಇದಕ್ಕಾಗಿ ನೀವು ವಾಟ್ಸ್​ಆಯಪ್ ವೆಬ್ ಅನ್ನು ಬಳಸಬೇಕಾಗುತ್ತದೆ. ವಿಶೇಷವಾಗಿ ಕಚೇರಿಯಲ್ಲಿ ಕೆಲಸ ಮಾಡುವಾಗ ಈ ವೈಶಿಷ್ಟ್ಯವು ಬಹಳಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಫೋನ್ ಅನ್ನು ಮತ್ತೆ ಮತ್ತೆ ನೋಡಬೇಕಾಗಿಲ್ಲ.

ನಂಬರ್ ಸೇವ್ ಮಾಡದೆ ಮೆಸೇಜ್ ಸೆಂಡ್ ಮಾಡಿ

ವಾಟ್ಸ್‌ಆಯಪ್ನಲ್ಲಿ ನಂಬರ್ ಸೇವ್ ಮಾಡದೆಯೇ ಸಂದೇಶ ಕಳುಹಿಸಬಹುದು. ಇದಕ್ಕಾಗಿ ಮೊದಲು ನೀವು ವಾಟ್ಸ್‌ಆಯಪ್ನ ಬಲ ಮೂಲೆಯಲ್ಲಿರುವ + ಐಕಾನ್ ಮೇಲೆ ಕ್ಲಿಕ್ ಮಾಡಿ ನಂಬರ್ ಟೈಪ್ ಮಾಡಬೇಕು. ನಂತರ ಚಾಟ್ ವಿಂಡೋ ತೆರೆದುಕೊಳ್ಳುತ್ತದೆ. ಈ ರೀತಿ ಮೆಸೇಜ್ ಕಳುಹಿಸಬಹುದು. ಅಥವಾ ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ (ಡೇಟಾ) ಆನ್ ಮಾಡಿ ಬ್ರೌಸರ್ ಆಯಪ್‌ನ (ಉದಾ. ಕ್ರೋಮ್) ಅಡ್ರೆಸ್ ಬಾರ್‌ನಲ್ಲಿ https://wa.me/91 ಅಂತ ಬರೆದು, ಬಳಿಕ ಆ ವ್ಯಕ್ತಿಯ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು (ಸ್ಪೇಸ್ ಇಲ್ಲದೆ) ದಾಖಲಿಸಿ. ಇಷ್ಟಾಗಿ ಎಂಟರ್ ಕೊಟ್ಟ ನಂತರ ಅದು ನೇರವಾಗಿ ಫೋನ್‌ನಲ್ಲಿರುವ ವಾಟ್ಸ್‌ಆಯಪ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್‌ಆಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. 'ಮೆಸೇಜ್' ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್‌ಆಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries