ನವದೆಹಲಿ :ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಕಳೆದ 10 ವರ್ಷಗಳಲ್ಲಿ ಜಿಡಿಪಿಗೆ 60 ಶತಕೋಟಿ ಡಾಲರ್‌ಗಳ ಕೊಡುಗೆಯನ್ನು ನೀಡಿದೆ ಮತ್ತು 4.7 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವರದಿಯು ತಿಳಿಸಿದೆ.
ನವದೆಹಲಿ :ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಕಳೆದ 10 ವರ್ಷಗಳಲ್ಲಿ ಜಿಡಿಪಿಗೆ 60 ಶತಕೋಟಿ ಡಾಲರ್‌ಗಳ ಕೊಡುಗೆಯನ್ನು ನೀಡಿದೆ ಮತ್ತು 4.7 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವರದಿಯು ತಿಳಿಸಿದೆ.
ಕಳೆದ 10 ವರ್ಷಗಳಲ್ಲಿ ದೇಶವು ಸುಮಾರು 13 ಬಿ.ಡಾ.ಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದು,ನೇರ ಮತ್ತು ಪರೋಕ್ಷ ಲಾಭಗಳೊಂದಿಗೆ ಈ ಕ್ಷೇತ್ರವು ರಾಷ್ಟ್ರೀಯ ಜಿಡಿಪಿಗೆ 60 ಬಿ.ಡಾ.ಗಳ ಕೊಡುಗೆಯನ್ನು ಸಲ್ಲಿಸಿದೆ ಎಂದು ವರದಿಯು ತೋರಿಸಿದೆ.
ಇಸ್ರೋ ಆರಂಭಿಸಿರುವ ಜಾಗತಿಕ ಸಲಹಾ ಸಂಸ್ಥೆ ನೋವಾಸ್ಪೇಸ್ ಸಿದ್ಧಗೊಳಿಸಿರುವ ವರದಿಯನ್ನು ಕೇಂದ್ರ ಸಹಾಯಕ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಅವರು ರಾಷ್ಟ್ರಿಯ ಬಾಹ್ಯಾಕಾಶ ದಿನ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
2014ರಲ್ಲಿ 3.8 ಬಿಲಿಯನ್ ಡಾಲರ್ ಗಳಷ್ಟಿದ್ದ ಬಾಹ್ಯಾಕಾಶ ಕ್ಷೇತ್ರದ ಅಂದಾಜು ಆದಾಯ 2023ಕ್ಕೆ 6.3 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ನೋವಾಸ್ಪೇಸ್‌ನ ಸಂಯೋಜಿತ ಕಾರ್ಯಕಾರಿ ಸಲಹೆಗಾರ ಸ್ಟೀವ್ ಬಾಷಿಂಗರ್ ಹೇಳಿದರು.
ಹೂಡಿಕೆಗೆ ಸಂಬಂಧಿಸಿದಂತೆ ಭಾರತವು ವಿಶ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಂಟನೇ ದೊಡ್ಡ ದೇಶವಾಗಿದ್ದು,ಸ್ಟಾರ್ಟಅಪ್‌ಗಳ ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಹೇಳಿರುವ ವರದಿಯು,ಇಸ್ರೋದಿಂದ ಪ್ರತಿ ದಿನ ಸುಮಾರು ಎಂಟು ಲಕ್ಷ ಮೀನುಗಾರರು ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ಸುಮಾರು 140 ಕೋಟಿ ಭಾರತೀಯರೂ ಉಪಗ್ರಹ ಆಧಾರಿತ ಹವಾಮಾನ ಮುನ್ಸೂಚನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.