ವಯನಾಡು : ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ನೂರಾರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಹಲವರಿಗೆ ಗಾಯಗಳಾಗಿವೆ..ನೂರಾರು ಕುಟುಂಬಗಳು ಛಿದ್ರಗೊಂಡಿವೆ. ಈ ಮಧ್ಯೆ ಮಾತು ಬಾರದ ಮೂಖಪ್ರಾಣಿಗಳ ವೇದನೆ ಹೇಳತೀರದು. ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ದೃಶ್ಯಗಳು ಹೃದಯ ವಿದ್ರಾವಕವಾಗಿದೆ.
ವಯನಾಡಿನಲ್ಲಿ ಭೂಕುಸಿತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಜಿಲ್ಲೆಯ ಜನರ ವಿನಾಶಕಾರಿ ಪರಿಸ್ಥಿತಿಯನ್ನು ತೋರಿಸುತ್ತಿದೆ. ವಯನಾಡ್ ಭೂಕುಸಿತ ಪ್ರದೇಶದಿಂದ ಒಂದು ಹೃದಯಸ್ಪರ್ಶಿ ವೀಡಿಯೋ ಕೂಡ ಹೊರಹೊಮ್ಮಿದೆ, ಅಲ್ಲಿ ಭೂಕುಸಿತದ 6 ದಿನಗಳ ನಂತರ ನಾಯಿಯೊಂದು ತನ್ನ ಮಾಲೀಕರೊಂದಿಗೆ ಮತ್ತೆ ಸೇರುವುದನ್ನು ಕಾಣಬಹುದು.
ವಯನಾಡ್ ದುರಂತದಿಂದಾಗಿ ಮಾನವರಗಿಂತ ಹೆಚ್ಚಾಗಿ ಮೂಖಪ್ರಾಣಿಗಳು ಕಷ್ಟಪಡುತ್ತಿವೆ. ಮನೆ, ಕುಟುಂಬದ ಜತೆ ಮಕ್ಕಳಂತೆ ಸಾಕಿದ ಸಾಕುಪ್ರಾಣಿಗಳನ್ನೂ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಾಯಿಯೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಭೂಕುಸಿತದಲ್ಲಿ ಕಳೆದುಹೋದ ನಾಯಿ ಆರು ದಿನಗಳ ನಂತರ ತನ್ನ ಮಾಲೀಕನನ್ನು ಪತ್ತೆ ಮಾಡಿದೆ. ನಾಯಿ ಮಾಲೀಕರ ತಲುಪಿದೆ. ತನ್ನ ಸಾಕು ನಾಯಿ ಕಾಣುತ್ತಿದ್ದಂತೆ ಮಹಿಳೆ ಮುದ್ದಿಸಿದ್ದಾಳೆ. ಸಾಕಷ್ಟು ಖುಷಿ ಪಟ್ಟಿದ್ದಾಳೆ. ಶ್ವಾನ ಕೂಡ ಮಹಿಳೆಯನ್ನು ಕಂಡು ಆಕೆಯನ್ನು ಅಪ್ಪಿಕೊಳ್ಳುವಂತೆ ಮಾಡಿದೆ. ಆರು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.