ಇಂಫಾಲ್: ಹಿಂಸಾಚಾರ ಕ್ರಮೇಣ ತಗ್ಗುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ಸಂಪೂರ್ಣ ಶಾಂತಿ ಮರುಸ್ಥಾಪನೆ ಮಾಡಲಾಗುವುದು ಎಂದು ಹೇಳಿರುವ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ಯಾವುದೇ ಕಾರಣಕ್ಕೂ ಪದತ್ಯಾಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ನಾನು ಯಾವುದೇ ಅಪರಾಧವನ್ನಾಗಲಿ ಅಥವಾ ಹಗರಣವನ್ನಾಗಲಿ ಮಾಡಿಲ್ಲ. ಹೀಗಾಗಿ, ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದಾರೆ.
ಪಿಟಿಐ ವಿಡಿಯೋಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಮಾತು ಹೇಳಿರುವ ಅವರು, 'ಕೇಂದ್ರ ಸರ್ಕಾರದ ನೆರವಿನಿಂದ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.
'ಸಂಘರ್ಷ ಶಮನಕ್ಕಾಗಿ ಕುಕಿ-ಜೋ ಮತ್ತು ಮೈತೇಯಿ ಗುಂಪುಗಳೊಂದಿಗೆ ಮಾತುಕತೆ ನಡೆಸಲು ಶಾಸಕ ದಿಂಗಾಂಗ್ಲುಂಗ್ ಗಂಗ್‌ಮೈ ಅವರನ್ನು ಮಧ್ಯಸ್ಥಗಾರರನ್ನಾಗಿ ನೇಮಕ ಮಾಡಲಾಗಿದೆ' ಎಂದು ಅವರು ಇದೇ ಮೊದಲ ಬಾರಿಗೆ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ನಾಗಾ ಸಮುದಾಯಕ್ಕೆ ಸೇರಿದ ದಿಂಗ್ಲಾಂಗ್ಲುಂಗ್ ಅವರು ಗುಡ್ಡಗಾಡು ಪ್ರದೇಶ ಸಮಿತಿ ಅಧ್ಯಕ್ಷರೂ ಆಗಿದ್ದಾರೆ.
'ಶಾಂತಿ ಮರುಸ್ಥಾಪನೆಗಾಗಿ ಯಾವ ರೀತಿಯ ಗಡುವು ನಿಗದಿಪಡಿಸಲಾಗಿದೆ' ಎಂಬ ಪ್ರಶ್ನೆಗೆ, 'ಉಭಯ ಸಮುದಾಯಗಳೊಂದಿಗೆ ಮಾತುಕತೆ ನಡೆಸುವ ಜೊತೆಗೆ, ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತದೆ. ಗೃಹ ಸಚಿವಾಲಯ ಇಲ್ಲವೇ ಕೇಂದ್ರೀಯ ಸಂಸ್ಥೆಗಳ ಮೂಲಕ ಈ ಕಾರ್ಯ ಸಾಧಿಸಲಾಗುವುದು' ಎಂದು ಅವರು ಉತ್ತರಿಸಿದ್ದಾರೆ.