ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‍ನ ಅಮೃತ ಮಹೋತ್ಸವ ಕಾರ್ಯಕ್ರಮವು ಆಗಸ್ಟ್ 31 ಶನಿವಾರ ಜರಗಲಿರುವುದು. ಬೆಳಗ್ಗೆ 9.30ಕ್ಕೆ ಧ್ವಜಾರೋಹಣ ನಡೆಯಲಿದೆ. ನಂತರ ಬ್ಯಾಂಕ್ ನ ಸಮನ್ವಯ ಸಭಾ ಭವನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಯಂತ ಪಾಟಾಳಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಹಕಾರಿ ಸಂಘಗಳ ಸಹಾಯಕ ನೊಂದಾವಣಾಧಿಕಾರಿ ಲಸಿತಾ ಕೆ. ಉದ್ಘಾಟಿಸುವರು. ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಕೆ. ವರದಿ ಮಂಡಿಸುವರು. ಕೋ ಓಪರೇಟಿವ್ ಸೊಸೈಟಿಯ ಸಹಾಯಕ ನಿರ್ದೇಶಕಿ ರೆಮಾ ಎ. ಅವರು ಬ್ಯಾಂಕ್ ಸಂಸ್ಥಾಪಕ ರಘುರಾಮ ಆಳ್ವ ರ ಭಾವಚಿತ್ರ ಅನಾವರಣಗೊಳಿಸುವರು. ಪುತ್ತಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅವರು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸುವರು. ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ನಿವೃತ್ತ ಕಾರ್ಯದರ್ಶಿಗಳು ಹಾಗೂ ಬ್ಯಾಂಕ್ ನ ನಿವೃತ್ತ ಉದ್ಯೋಗಿಗಳನ್ನು ಸಹಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಅಭಿನಂದಿಸಲಿರುವರು. ಮುಖ್ಯ ಅತಿಥಿಗಳಾಗಿ ಕೇರಳ ರಾಜ್ಯ ಕೋಓಪರೇಟಿವ್ ನಿರ್ದೇಶಕ ಸಾಬು ಅಬ್ರಹಾಂ, ಸಹಾಯಕ ನೊಂದಾವಣಾಧಿಕಾರಿಗಳಾದ ನಾಗೇಶ್ ಕೆ., ರವೀಂದ್ರ ಎ. ಪಾಲ್ಗೊಳ್ಳುವರು. ಶಿವರಾಮ ಭಟ್ ಎಚ್., ಗಣೇಶ್ ಪಾರೆಕಟ್ಟ, ಸುನಿಲ್ ಕುಮಾರ್, ಬೈಜು ರಾಜ್, ಸಜಿ ಟಿ., ಎಸ್.ಎನ್.ರಾವ್., ವಿನೋದ್ ಕುಮಾರ್, ಅನಿತಾಶ್ರೀ, ಜನಾರ್ದನ ಪೂಜಾರಿ, ಕಾವ್ಯಶ್ರೀ, ಜಯಂತಿ ಶುಭಾಶಂಸನೆಗೈಯಲಿರುವರು. ನಿವೃತ್ತ ಕಾರ್ಯದರ್ಶಿ ಕೃಷ್ಣ ಭಟ್ ಅಮ್ಮಂಕಲ್ಲು ಪ್ರಾಸ್ತಾವಿಕ ಮಾತನಾಡಲಿರುವರು. ನಿರ್ದೇಶಕ ಎಚ್. ರಾಮ ಭಟ್, ಉಪಾಧ್ಯಕ್ಷ ಶ್ಯಾಮರಾಜ ಡಿ.ಕೆ., ನಿದೇಶಕಿ ಲಕ್ಷ್ಮೀ ವಿ. ಭಟ್ ಮೊದಲಾದವರು ಉಪಸ್ಥಿತರಿರುವರು.
ಮಧ್ಯಾಹ್ನ 11.30ರಿಂದ ಕಾಳುಮೆಣಸು ಕೃಷಿ ಮತ್ತು ನಿರ್ವಹಣೆ ಕುರಿತು ತಜ್ಞ ಕೃಷಿಕ ಡಾ. ವೇಣುಗೋಪಾಲ ಕಳೆಯತ್ತೋಡಿ ವಿಚಾರಗೋಷ್ಠಿ ಮಂಡಿಸಲಿರುವರು. 12.30ರಿಂದ ಸಹಕಾರ ಭಾರತಿಯ ರಾಷ್ಟ್ರೀಯ ಸಮಿತಿ ಸದಸ್ಯ ವಕೀಲ ಕರುಣಾಕರನ್ ನಂಬ್ಯಾರ್ ಅವರು ಸರ್ಕಾರದಿಂದ ಜನರಿಗೆ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವರು. ಮಧ್ಯಾಹ್ನ 1.30ರಿಂದ ಭೋಜನ ವಿರಾಮ, 2.30ರಿಂದ ರಾಜೇಶ್ ಮಳಿ ಮಂಗಳಾ ಮ್ಯಾಜಿಕ್ ವಲ್ರ್ಡ್ ಮಂಗಳೂರು ಇವರಿಂದ ಇಂದ್ರಜಾಲ ಪ್ರದರ್ಶನ, 4 ರಿಂದ ವಿಶಾಲ ಯಕ್ಷ ಬಳಗ ನಂದಳಿಕೆ ಕಾರ್ಕಳ ಇವರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.