ನವದೆಹಲಿ: '100 ವಂದೇ ಭಾರತ ಎಕ್ಸ್‌ಪ್ರೆಸ್ ರೈಲುಗಳನ್ನು ಒಳಗೊಂಡಂತೆ ಒಟ್ಟು 772 ರೈಲು ಸೇವೆಗಳನ್ನು ಕಳೆದ ಐದು ವರ್ಷಗಳಲ್ಲಿ ಭಾರತೀಯ ರೈಲ್ವೆ ಆರಂಭಿಸಿದೆ' ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

'ಹೊಸ ಹೊಸ ರೈಲು ಸೇವೆಗಳನ್ನು ಆರಂಭಿಸುವುದು ಇಲಾಖೆಗೆ ಹೊಸತೇನಲ್ಲ.
'ಜನರ ಅನುಕೂಲಕ್ಕಾಗಿ ಎಕ್ಸ್‌ಪ್ರೆಸ್ ರೈಲುಗಳು, ಸೂಪರ್‌ಫಾಸ್ಟ್ ರೈಲುಗಳು, ಪ್ಯಾಸೆಂಜರ್, ಉಪನಗರ ರೈಲು ಸೇವೆಗಳನ್ನು ಇಲಾಖೆ ನೀಡುತ್ತಿದೆ. ಜೊತೆಗೆ, ಇದೇ ವರ್ಷದ ಜುಲೈ 29ರವರೆಗೆ, 102 ವಂದೇ ಭಾರತ ಎಕ್ಸ್‌ಪ್ರೆಸ್‌ಗಳ ಸಂಚಾರ ದೇಶದಾದ್ಯಂತ ನಡೆಯಿತು. ಗರಿಷ್ಠ 760 ಕಿ.ಮೀ. ದೂರದವರೆಗೆ ಈ ರೈಲು ಸೇವೆ ಒದಗಿಸುತ್ತಿದೆ' ಎಂದು ಸಚಿವ ಹೇಳಿದ್ದಾರೆ.