HEALTH TIPS

ಹೊಸ ಪೀಳಿಗೆ ಸ್ವಾತಂತ್ರ್ಯದ ಕಾವಲುಗಾರರಾಗಬೇಕು-ಸಚಿವ ಕೆ ಕೃಷ್ಣನ್ ಕುಟ್ಟಿ: ಕಾಸರಗೋಡಿನಲ್ಲಿ 78ನೆ ಸ್ವಾತಂತ್ರ್ಯೋತ್ಸವ


              ಕಾಸರಗೋಡು: ಪ್ರಜಾಪ್ರಭುತ್ವದ ಸಂರಕ್ಷಣೆಯೊಂದಿಗೆ ಜಾತ್ಯತೀತ ಮೌಲ್ಯ ಎತ್ತಿ ಹಿಡಿಯುವ ಮೂಲಕ ಹೊಸತಲೆಮಾರು ಸ್ವಾತಂತ್ರ್ಯದ ಕಾವಲುಗಾರನಾಗಬೇಕು ಎಂಬುದಾಗಿ ಇಂಧನ ಖಾತೆ ಸಚಿವ ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.

               ಅವರು ಕಾಸರಗೋಡು ಜಿಲ್ಲಾಡಳಿತ ವತಿಯಿಂದ ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನಡೆಸಿ, ಪಥಸಂಚಲನದ ಗೌರವವಂದನೆ ಸ್ವೀಕರಿಸಿ ಮಾತನಾಡಿದರು.

                ವಯನಾಡಿನಲ್ಲಿ ಸಂಭವಿಸಿದ ದುರಂತ ರಾಜ್ಯದ ಜನತೆಯನ್ನು ದು:ಖಕ್ಕೆ ತಳ್ಳಿದೆ. ಸಂಕಷ್ಟದಲ್ಲಿರುವವರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಜನತೆ ಒಗ್ಗೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತರಿಗೆ ನೆರವಾಗುವ ಮೂಲಕ ವಯನಾಡಿನ ಪುನ:ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆಯೂ ಸಚಿವರು ಮನವಿ ಮಾಡಿದರು. ಎರಡು ಪ್ರವಾಹ ಮತ್ತು ಕೋವಿಡ್‍ನಿಂದ ಪ್ರಾಣ ಕಳೆದುಕೊಮಡವರಿಗಾಗಿ ಶ್ರದ್ಧಾಂಜಲಿ ಸಲ್ಲಿಸುವುದರ ಜತೆಗೆ ಬದುಕುಳಿದವರಿಗಾಗಿ ಪುನರ್ವಸತಿ ಕಲ್ಪಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.


ಉಡುಪಿ-ಕಾಸರಗೋಡು ಯೋಜನೆ ಶೀಘ್ರ ಪೂರ್ತಿ:

           ಉಡುಪಿ-ಕಾಸರಗೋಡು, ಕರಿಂದಲಂ-ವಯನಾಡ್ 400 ಕೆವಿ ಲೈನ್ ನಿರ್ಮಾಣ ಮತ್ತು ಕರಿಂತಲಂ 400 ಕೆವಿ ಸಬ್ ಸ್ಟೇಷನ್ ನಿರ್ಮಾಣವನ್ನು ಕೇರಳದ ಎಡರಂಗ ಸರ್ಕಾರದ ಕಾಲಾವಧಿಯಲ್ಲಿ ಪಊರ್ತಿಗೊಳಿಸಲಾಗುವುದು. ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ವಿದ್ಯುತ್ ಲೈನ್ ಹಾದು ಹೋಗುವ ಪ್ರದೇಶಗಳಲ್ಲಿ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹಾಗೂ ಮಾಲೀಕರಿಗೆ ಪರಿಹಾರ ನೀಡುವ ವಿಚಾರದಲ್ಲಿನ ವಿವಾದ ಇತ್ಯರ್ಥಪಡಿಸಲು ಕೆಎಸ್‍ಇಬಿ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೃಷ್ಣನಕುಟ್ಟಿ ತಿಳಿಸಿದರು.  ಯೋಜನೆ ಪೂರ್ತಿಗೊಂಡಲ್ಲಿ ಉತ್ತರ ಮಲಬಾರ್ ಪ್ರದೇಶ ಮತ್ತು ಕಾಸರಗೋಡಿನ ವಿದ್ಯುತ್ ಕ್ಷೇತ್ರದ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಲಿರುವುದಾಗಿ ತಿಳಿಸಿದರು. 

             ಕಾಸರಗೋಡು ಇನ್ಸ್‍ಪೆಕ್ಟರ್ ಎಸ್‍ಎಚ್‍ಒ ನಳಿನಾಕ್ಷನ್ ಸ್ವಾತಂತ್ರ್ಯ ದಿನಾಚರಣೆ ಪರೇಡ್ ನೇತೃತ್ವ ವಹಿಸಿದ್ದರು. ಎರಡನೇ ಕಮಾಂಡೆಂಟ್ ಆಗಿ ಮೇಲ್ಪರಂಬ ಪೆÇಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಅನೀಶ್ ಕಾರ್ಯಚರಿಸಿದರು.

          ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ ಅಶ್ರಫ್, ಎನ್ ಎ ನೆಲ್ಲಿಕುನ್ನು,  ವಕೀಲ ಸಿ.ಎಚ್ ಕುಞಂಬು, ಇ. ಚಂದ್ರಶೇಖರನ್, ಎಂ. ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಚೆಂಗಳ ಗ್ರಾಪಂ ಅಧ್ಯಕ್ಷ ಖಾದರ್ ಬದರಿಯಾ, ಸ್ವಾತಂತ್ರ್ಯ ಹೋರಾಟಗಾರರಾದ ಕ್ಯಾಪ್ಟನ್ ಕೆ.ಎಂ.ಕುಞÂಕಣ್ಣನ್ ನಂಬಿಯಾರ್, ಗೋಪಾಲನ್ ನಾಯರ್,  ಎ.ಡಿ.ಎಂ. ಪಿ. ಅಖಿಲ್, ಎಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು,   ಕಲೆಕ್ಟರೇಟ್ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಮಡಿದ್ದರು.   ಕಾಸರಗೋಡು ಸಾರಿ ನೇಯ್ಗೆ ತಂಡದಿಂದ ನೇಯ್ದ ಶಾಲುಗಳನ್ನು ಗಣ್ಯರಿಗೆ ಸ್ಮರಣಿಕೆಯಾಗಿ ನೀಡಲಾಯಿತು. ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries