ಕಾಸರಗೋಡು: ಜಿಲ್ಲಾಡಳಿತ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯೋತ್ಸವ ಆ. 15ರಂದು ಕಾಸರಗೋಡು ವಿದ್ಯಾನಗರದ ನಗರಸಭಾ ಸ್ಟೇಡಿಯಂನಲ್ಲಿ ಜರುಗಲಿದೆ. ಬೆಳಗ್ಗೆ8.20ಕ್ಕೆ ನಡೆಯುವ ಸಮಾರಂಭದಲ್ಲಿ ರಾಜ್ಯ ಇಂಧನ ಖಾತೆ ಸಚಿವ ಕೃಷ್ಣನ್ ಕುಟ್ಟಿ ಧ್ವಜಾರೋಹಣ ನಡೆಸುವರು.
ಜಿಲ್ಲಾ ಸಶಸ್ತ್ರ ಪೊಲೀಸ್, ಸಥಳೀಯ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ, ಅಬಕಾರಿ, ಸೀನಿಯರ್ ಡಿವಿಶನ್ ಎನ್‍ಸಿಸಿ, ಸ್ಕೌಟ್ ಏಂಡ್ ಗೈಡ್ಸ್, ವಿವಿಧ ಶಾಲೆಗಳ ವಿದ್ಯಾರ್ಥಿ ಪೊಲೀಸ್ ಪ್ಲಟೂನ್ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಕಲಾ, ಸಾಂಸ್ಕøಥಿಕ ಕಾರ್ಯಕ್ರಮ ಜರುಗಲಿದೆ.
ಮುಖ್ಯ ಮಂತ್ರಿ ಪದಕ:
ಅಪರಾಧ ತನಿಖೆ, ಗುಡ್ ಸರ್ವೀಸ್ ಎಂಟ್ರಿ, ಅಪ್ರಸಿಯೇಶನ್ ಸೇರಿದಂತೆ ವಿಶಿಷ್ಟ ಸೇವೆಗಾಗಿ ಎಸ್.ಐ ಕೆ.ವಿ ಜೋಸೆಫ್ ಅವರು ಮುಖ್ಯ ಮಂತ್ರಿಯ ಪೊಲೀಸ್ ಮೆಡಲ್‍ಗೆ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಳೆದ 27ವರ್ಷಗಳಿಂದ ಸೇವೆಯಲ್ಲಿರುವ ಇವರು ಕಾಸರಗೋಡು, ಹೊಸದುರ್ಗ, ಚಂದೇರ, ನೀಲೇಶ್ವರ ಪೊಲೀಸ್ ಠಾಣೆ, ಕಾಸರಗೋಡು ವಿಜಿಲೆನ್ಸ್‍ನಲ್ಲೂ ಸೇವೆ ಸಲ್ಲಿಸಿದ್ದು, ಪ್ರಸಕ್ತ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎನ್‍ಡಿಪಿಎಸ್ ಕೋಓಡಿನೇಶನ್ ಸೆಲ್‍ನಲ್ಲಿ ಕಾರ್ಯಾಚರಿಸುತ್ತಿದ್ದಾರೆ.