ಕಾಸರಗೋಡು: ಸಾಕ್ಷರತಾ ಮಿಷನ್ 7ನೇ ತರಗತಿಯ ಸಮಾನತೆ ಪರೀಕ್ಷೆ ನಡೆಸಿತು. ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಕಾಸರಗೋಡು ಜಿಲ್ಲೆಯ ಶಾಲೆಗಳಿಂದ ವ್ಯಾಸಂಗವನ್ನು ಪೂರ್ಣಗೊಳಿಸದವರಿಗೆ 7 ನೇ ತರಗತಿಯ ಸಮಾನತೆಯ ಪರೀಕ್ಷೆಯನ್ನು ನಡೆಸಿತು. ಪರೀಕ್ಷೆಯನ್ನು ಎರಡು ದಿನಗಳ ಕಾಲ (ಆಗಸ್ಟ್ 24 ಮತ್ತು 25) ನಡೆಸಲಾಯಿತು. ಮೊದಲ ದಿನ ಜಿಲ್ಲೆಯ ಒಂಬತ್ತು ಶಾಲೆಗಳಲ್ಲಿ 123 ವಿದ್ಯಾರ್ಥಿಗಳು ಹಾಜರಾಗಿದ್ದರು. ಶನಿವಾರ ಮಲಯಾಳಂ/ಕನ್ನಡ ಇಂಗ್ಲಿಷ್ ಹಿಂದಿಯಲ್ಲಿ ಪರೀಕ್ಷೆ ನಡೆದಿತ್ತು. ಸಮಾಜ ಅಧ್ಯಯನ, ಮೂಲ ವಿಜ್ಞಾನ ಮತ್ತು ಗಣಿತ ಪರೀಕ್ಷೆಗಳು ಭಾನುವಾರ ನಡೆಯಿತು.
ಎಂಟು ತಿಂಗಳ ತರಬೇತಿಯ ನಂತರ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. 4 ನೇ ತರಗತಿ ಅಥವಾ ಸಾಕ್ಷರತಾ ಮಿಷನ್ ನಡೆಸುವ ಶಾಲೆಯಿಂದ 4 ನೇ ತರಗತಿ ಸಮಾನತೆಯನ್ನು ಉತ್ತೀರ್ಣರಾದವರು 7 ನೇ ತರಗತಿ ಸಮಾನತೆ ಪರೀಕ್ಷೆ ಬರೆದರು. ಕಾಞಂಗಾಡ್ ನಗರಸಭೆಯ 62 ವರ್ಷದ ಬೇಬಿ ಸಿವಿ ಪರೀಕ್ಷೆಗೆ ಹಾಜರಾದ ಹಿರಿಯ ವಿದ್ಯಾರ್ಥಿನಿ. ಕಾಞಂಗಾಡ್ ನಗರಸಭೆಯ 17 ವರ್ಷದ ಮುಹಮ್ಮದ್ ಸಿಯಾನ್ ಕಿರಿಯ ವಿದ್ಯಾರ್ಥಿ. ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು 37 ವರ್ಷದ ವಿಕಲಚೇತನ ವಿದ್ಯಾರ್ಥಿನಿ ನಜೀರಾ ಅವರಿಗೆ ಪ್ರಶ್ನೆ ಪತ್ರಿಕೆ ನೀಡುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಬಿಂದು ಟೀಚರ್ ಹಾಗೂ ಶಿಕ್ಷಕಿ ಉಷಾ ಟೀಚರ್ ಮಾತನಾಡಿದರು. ಸಿ.ಕೆ.ಪುಷ್ಪಕುಮಾರಿ, ಎ.ತಂಗಮಣಿ, ಕೆ.ಸುಜಿತಾ ಪರೀಕ್ಷೆ ನಡೆಸಿಕೊಟ್ಟರು. ಕಾಞಂಗಾಡ್ ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪರೀಕ್ಷೆಯನ್ನು ಕಾಞಂಗಾಡ್ ನಗರಸಭಾ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಉದ್ಘಾಟಿಸಿದರು. ಜಿಲ್ಲಾ ಸಾಕ್ಷರತಾ ಸಮಿತಿ ಸದಸ್ಯ ಪಪ್ಪನ್ ಕುತ್ತಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಎಂ.ಡಿ.ರಾಜೇಶ್ ಮಾತನಾಡಿದರು. ಪ್ರೇರಕರಾದ ಎಂ ಗೀತಾ ವಿ ರಜನಿ ಎಂ ನಾರಾಯಣಿ ಬಾಲಾಮಣಿ ಆಯೇಷಾ ಮಹಮ್ಮದ್, ಎಂ ಶಾಲಿನಿ ಪರೀಕ್ಷೆ ನಡೆಸಿದರು. ಬೋವಿಕ್ಕಾನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪರೀಕ್ಷೆಯನ್ನು ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಉದ್ಘಾಟಿಸಿದರು. ಪಂಚಾಯಿತಿ ಸದಸ್ಯರಾದ ಅಬ್ಬಾಸ್ ಕೊಳಚೆಪ್ಪು, ನಾರಾಯಣಿಕುಟ್ಟಿ, ಪ್ರಾಚಾರ್ಯ ಮೆಜೋ ಥಾಮಸ್, ಎಚ್.ಎಂ.ನಾರಾಯಣನ್ ಮಾಸ್ತರ್ ಮಾತನಾಡಿದರು. ಮಂಜೇಶ್ವರ ಎಸ್‍ಎಟಿ ಶಾಲೆಯಲ್ಲಿ ನಡೆದ ಪರೀಕ್ಷೆಯನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀರ ಟೀಚರ್ ಉದ್ಘಾಟಿಸಿದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಕೆ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಅಬ್ದುಲ್ ಹಮೀದ್, ಸಂಶೀನಾ, ಕೆ.ವಿ.ರಾಧಾಕೃಷ್ಣನ್ ಅನಿಲ್ ಕುಮಾರ್, ಬ್ಲಾಕ್ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಸ್.ಪಿ.ಮನೋಜ್ ಮಾತನಾಡಿದರು. ಪ್ರೇರಕರಾದ ಗ್ರೇಸಿವೇಗಾಸ್, ಪರಮೇಶ್ವರ ನಾಯ್ಕ್, ಸುಜಾತಾ ಟಿ ಶೆಣೈ, ಶೋಭಾ ರವಿಶಂಕರ್, ಪಿ ವಿಶ್ವನಾಥ ಮತ್ತು ಪೂರ್ಣಿಮಾ ಪರೀಕ್ಷೆ ನಡೆಸಿದರು. ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪರೀಕ್ಷೆಯನ್ನು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಉದ್ಘಾಟಿಸಿದರು. ವಿಲಾಸಿನಿ ಮತ್ತು ಸಾವಿತ್ರಿ ಪರೀಕ್ಷೆ ನಡೆಸಿದರು. ನೀಲೇಶ್ವರ ರಾಜಾಸ್ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷೆಯ ನೋಡಲ್ ಪ್ರೇರಕ ರಾಧಾ ಅಧ್ಯಕ್ಷತೆ ವಹಿಸಿದ್ದರು. ಜಿಎಚ್‍ಎಸ್‍ಎಸ್ ಪರಪ್ಪದಲ್ಲಿ ನಡೆದ ಪರೀಕ್ಷೆಯನ್ನು ಕಿನಾನೂರು ಕರಿಂದಳ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ ಉದ್ಘಾಟಿಸಿದರು. ಕೆ.ಒ.ಅನಿಲಕುಮಾರ್ ವಿನ್ಸೆಂಟ್, ರಜಿನಿ ಕಳ್ಳಾರ್, ವಿದ್ಯಾ ಹಾಗೂ ಲತಿಕಾ ಯಾದವ್ ನೇತೃತ್ವ ವಹಿಸಿದ್ದರು. ತೃಕರಿಪುರದಲ್ಲಿ ನಡೆದ ಪರೀಕ್ಷೆಯ ಅಧ್ಯಕ್ಷತೆಯನ್ನು ನೋಡಲ್ ಪ್ರೇರಕಿ ಟಿ.ವಿ.ಪ್ರೀನಾ ವಹಿಸಿದ್ದರು. ಮುಳ್ಳೇರಿಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಪರೀಕ್ಷೆಯನ್ನು ಕಾರಡ್ಕ ಪಂಚಾಯತ್ ಉಪಾಧ್ಯಕ್ಷೆ ಎಂ.ಜನನಿ ಉದ್ಘಾಟಿಸಿದರು. ಎಂ ರತ್ನಾಕರ ಮಾತನಾಡಿದರು. ಪ್ರೇರಕರಾದ ತಂಗಮಣಿ, ಮಾಲತಿ, ಶಶಿಕಲಾ, ಕಾಂಚನಾ ಪರೀಕ್ಷೆ ನಡೆಸಿದರು.