ನವದೆಹಲಿ: ರಾವತ್‌ಬಾಟಾದಲ್ಲಿ ನಿರ್ಮಿಸಲಾಗುತ್ತಿರುವ ರಾಜಸ್ಥಾನ ಅಣು ವಿದ್ಯುತ್ ಯೋಜನೆಯ ಏಳನೇ ಸ್ಥಾವರ (ಆರ್‌ಎಪಿಪಿ-7) ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಆಗಸ್ಟ್ 1ರಿಂದ ಅದಕ್ಕೆ ಇಂಧನ ಭರ್ತಿ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ ಶುಕ್ರವಾರ ತಿಳಿಸಿದೆ.
ದೇಶದ ಮೂರನೇ ಅತಿದೊಡ್ಡ ಪರಮಾಣು ಸ್ಥಾವರ ಇದಾಗಿದ್ದು, 700 ಮೆಗಾವಾಟ್ ಸಾಮರ್ಥ್ಯ ಹೊಂದಿದೆ. ಈ ವರ್ಷಾಂತ್ಯದಿಂದ ಇದು ಕಾರ್ಯಾರಂಭ ಮಾಡಲಿದೆ. ಇದು ಕಾರ್ಯಾರಂಭ ಶುರು ಮಾಡಿದರೆ, ರಾವತ್‌ಬಾಟಾವು ದೇಶದ ಅತಿದೊಡ್ಡ ಪರಮಾಣು ಪಾರ್ಕ್ ಎಂದು ಕರೆಸಿಕೊಳ್ಳಲಿದೆ. ಮುಂದಿನ ವರ್ಷದಿಂದ ಆರ್‌ಎಪಿಪಿ- 8ಕ್ಕೆ ಚಾಲನೆ ನೀಡಲಾಗುವುದು ಎಂದು ಎನ್‌ಪಿಸಿಐಎಲ್ ತಿಳಿಸಿದೆ.