ತಿರುವನಂತಪುರಂ: ಯಾವುದೇ ಪ್ರಕೃತಿ ವಿಕೋಪದಿಂದ ನಾವು ಇನ್ನೂ ಪಾಠ ಕಲಿತಿಲ್ಲ, ಕೇರಳದ ಶೇ.85ರಷ್ಟು ಕ್ವಾರಿಗಳು ಅಕ್ರಮವಾಗಿವೆ ಎಂದು ಮಾಧವ್ ಗಾಡ್ಗೀಳ್ ಹೇಳಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶಗಳನ್ನು ನಿರ್ಧರಿಸುವಾಗ ಪ್ರಾದೇಶಿಕ ಅಭಿವೃದ್ಧಿಯಲ್ಲಿ ಯಾವುದೇ ಭಾಗವಹಿಸುವಿಕೆ ಇರುವುದಿಲ್ಲ. ರಾಜಕಾರಣಿಗಳು ಮತ್ತು ಕ್ವಾರಿ ಮಾಲೀಕರ ನಡುವೆ xಡ್ಯಂತ್ರವಿದೆ ಎಂದವರು ತಿಳಿಸಿರುವರು.
ಕೇರಳದಲ್ಲಿ ಈಗಲೂ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದ್ದು, ಭೂಕುಸಿತದಂತಹ ಅನಾಹುತಗಳು ಸಂಭವಿಸಿದಾಗ ಬಡವರು ಬಲಿಯಾಗುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ತೋಟಗಾರಿಕೆ ವಲಯದ ನಿರ್ವಹಣೆಯನ್ನು ಕಾರ್ಮಿಕರ ಸಹಕಾರ ಸಂಘಗಳಿಗೆ ವಹಿಸಬೇಕು. ವಿಪತ್ತು ಪೀಡಿತ ಪ್ರದೇಶಗಳಲ್ಲಿ ರೆಸಾರ್ಟ್ ಪ್ರವಾಸೋದ್ಯಮವನ್ನು ನಿಷೇಧಿಸಬೇಕು. ಗೋವಾದಂತೆ ಸ್ಥಳೀಯ ಜನರ ನೇತೃತ್ವದಲ್ಲಿ ಹೋಂಸ್ಟೇ ಶೈಲಿಯ ಅವಶ್ಯಕತೆ ಇದೆ ಎಂದರು.
ಪ್ರಸ್ತುತ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅವೈಜ್ಞಾನಿಕ ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ತಿಳಿಸಿರುವರು.