ಮಾಸ್ಕೊ: ಉಕ್ರೇನ್ನಲ್ಲಿ ನಾಗರಿಕರ ಮೇಲೆ ರಷ್ಯಾ ನಡೆಸಿದ ದಾಳಿಯ ಕುರಿತು ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ ರಷ್ಯಾದ ಪತ್ರಿಕೆಯೊಂದರ ಪ್ರಕಾಶಕರನ್ನು ದೋಷಿ ಎಂದು ಶುಕ್ರವಾರ ಘೋಷಿಸಿರುವ ಸೈಬೀರಿಯಾ ನ್ಯಾಯಾಲಯವು, ಅವರಿಗೆ ಎಂಟು ವರ್ಷಗಳ ಸಜೆ ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗೊರ್ನೊ-ಅಲ್ಟೈಸ್ಕ್ ನಗರದ ನ್ಯಾಯಾಲಯವು ಪತ್ರಕರ್ತ ಮತ್ತು ಪ್ರಕಾಶಕರಾದ ಸೆರ್ಗೆಯ್ ಮಿಖೈಲೋವ್ ಅವರನ್ನು ಶಿಕ್ಷೆಗೆ ಗುರಿಪಡಿಸಿದೆ.
ಸರ್ಗೆಯ್ ಅವರು ಅಲ್ಟಾಯ್ನ ಸೈಬೀರಿಯಾ ಪ್ರದೇಶದ ಪ್ರಮುಖ ಪತ್ರಕರ್ತರಾಗಿದ್ದು, ಸ್ಥಳೀಯ 'ಲಿಸ್ಟಾಕ್' ಪತ್ರಿಕೆಯ ಪ್ರಕಾಶಕರೂ ಆಗಿದ್ದಾರೆ. ರಷ್ಯಾ ಸೈನ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ್ದರಿಂದ ಅವರನ್ನು ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿದೆ.
2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ಮಾಸ್ಕೊ ದಾಳಿ ಆರಂಭಿಸಿದ ಬಳಿಕ ರಷ್ಯಾದಲ್ಲಿ ಜಾರಿಯಾದ ಹೊಸ ಕಾನೂನಿನ ಪ್ರಕಾರ, 'ರಷ್ಯಾದಲ್ಲಿ ಯುದ್ಧವನ್ನು ಟೀಕಿಸುವುದು ಅಪರಾಧವಾಗಿದೆ. ಹಲವು ಪತ್ರಕರ್ತರು ಸೇರಿದಂತೆ ನೂರಾರು ರಷ್ಯನ್ನರ ವಿರುದ್ಧ ಈ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ನಾಗರಿಕ ಹಕ್ಕು ಸಂಘಟನೆಗಳು ಹೇಳಿವೆ.