HEALTH TIPS

ನಾಳೆಯಿಂದ ಎಡನೀರು ಮಠದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ: 9ದಿನಗಳ ಕಾಲ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ

                  ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥಚಾತುರ್ಮಾಸ್ಯ ವ್ರತಾಚರಣೆ ಶ್ರೀಮಠದಲ್ಲಿ ಜರಗುತ್ತಿದ್ದು, ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಇವರ ಸೇವಾರೂಪದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ ಮತ್ತು ಯಕ್ಷಗಾನ ತಾಳಮದ್ದಳೆ ನವಾಹ ಆಗಸ್ಟ್ 3 ಶನಿವಾರದಂದು ಪ್ರಾರಂಭವಾಗಲಿದೆ. ಅಂದು ಸಂಜೆ 5.30ಕ್ಕೆ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಡಾ. ಟಿ. ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಶ್ರುತ ವಿದ್ವಾಂಸ ವಿದ್ವಾನ್ ಪಂಜ ಭಾಸ್ಕರ ಭಟ್ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಆ. 11ರ ತನಕ ಪ್ರತೀದಿನ ಸಂಜೆ 6 ಗಂಟೆಯಿAದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ.

ಶ್ರೀಮದ್ ದೇವೀ ಭಾಗವತ ನವಾಹ :

           ಪ್ರತೀದಿನ ಬೆಳಗ್ಗೆ 10ರಿಂದ ಮಧ್ಯಾಹ್ನ ತನಕ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ವೇದಮೂರ್ತಿ ಪರಕ್ಕಜೆ ಅನಂತ ಭಟ್, ವೇದಮೂರ್ತಿ ಹರಿನಾರಾಯಣ ಮಯ್ಯ ಕಾಸರಗೋಡು ಅವರಿಂದ ಶ್ರೀದೇವೀ ಭಾಗವತ ಪಾರಾಯಣ, ಪ್ರವಚನ ನಡೆಯಲಿದೆ.

ಯಕ್ಷಗಾನ ತಾಳಮದ್ದಳೆ :

           ಆ.3ರಂದು ಸಂಜೆ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ ಹಾಗೂ ಅಮೃತಾ ಅಡಿಗ ಭಾಗವತಿಕೆಯಲ್ಲಿ ಶ್ರೀಧರ ವಿಟ್ಲ, ಕೌಶಿಕ್ ರಾವ್ ಪುತ್ತಿಗೆ, ನಿಶ್ವತ್ ಜೋಗಿ ಹಿಮ್ಮೇಳದಲ್ಲಿ ಜೊತೆಗೂಡಲಿದ್ದಾರೆ. ವಿಟ್ಲ ಶಂಭುಶರ್ಮ, ಉಜಿರೆ ಅಶೋಕ ಭಟ್ಟ, ಗಾಳಿಮನೆ ವಿನಾಯಕ ಭಟ್ಟ, ಸೀತಾರಾಮ ಕುಮಾರ್ ಕಟೀಲು, ಸೂರಿಕುಮೇರಿ ಕೆ.ಗೋವಿಂದ ಭಟ್ಟ, ಗ.ನಾ.ಭಟ್ಟ ಮೈಸೂರು ಅರ್ಥಧಾರಿಗಳಾಗಿ ಪಾತ್ರ ನಿರ್ವಹಣೆ ಮಾಡಲಿದ್ದಾರೆ. ಆ.4ರಂದು ಸಂಜೆ ಸೀತಾಪಹಾರ ಪ್ರಸಂಗದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಭಾಗವತಿಕೆಯಲ್ಲಿ ಎ.ಪಿ.ಘಾಟಕ್, ಸುಜನ್ ಹಾಲಾಡಿ ಹಿಮ್ಮೇಳದಲ್ಲಿ ಜೊತೆಗೂಡಲಿದ್ದಾರೆ. ವಿಟ್ಲ ಶಂಭುಶರ್ಮ, ಡಾ. ರಮಾನಂದ ಬನಾರಿ, ವಿದ್ವಾನ್ ಸಂಕದಗುAಡಿ ಗಣಪತಿ ಭಟ್ಟ, ಡಾ. ಪ್ರದೀಪ ವಿ.ಸಾಮಗ, ವಾಸುದೇವ ರಂಗಾ ಭಟ್ಟ ಮಧೂರು, ಸುರೇಶ ಕುದ್ರೆಂತಾಯ ಅರ್ಥದಾರಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆ.5ರಂದು ಇಂದ್ರಜಿತು ಕಾಳಗ, ಆ.6ರಂದು ರಾವಣವಧೆ, ಆ.7ರಂದು ವೀರಮಣಿ ಕಾಳಗ, ಆ.8ರಂದು ಕೌಶಿಕ ಚರಿತ್ರೆ, ಆ.9ರಂದು ಪಾದುಕಾ ಪ್ರಧಾನ, ಆ.10ರಂದು ಸುಧನ್ವ ಕಾಳಗ, ಆ.11ರಂದು ಶಾಂಭವೀ ವಿಜಯ ಪ್ರಸಿದ್ಧ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಜರಗಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries