ದೇರ್-ಅಲ್-ಬಲಾಹ್: ನಿರಾಶ್ರಿತರ ಶಿಬಿರವನ್ನಾಗಿ ಮಾರ್ಪಾಡು ಮಾಡಲಾಗಿದ್ದ ಗಾಜಾದ ತಬೀನ್ ಶಾಲೆ ಮೇಲೆ ಇಸ್ರೇಲ್ ಶನಿವಾರ ವಾಯುದಾಳಿ ನಡೆಸಿದ ಪರಿಣಾಮ ಕನಿಷ್ಠ 93 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ.
ದೇರ್-ಅಲ್-ಬಲಾಹ್: ನಿರಾಶ್ರಿತರ ಶಿಬಿರವನ್ನಾಗಿ ಮಾರ್ಪಾಡು ಮಾಡಲಾಗಿದ್ದ ಗಾಜಾದ ತಬೀನ್ ಶಾಲೆ ಮೇಲೆ ಇಸ್ರೇಲ್ ಶನಿವಾರ ವಾಯುದಾಳಿ ನಡೆಸಿದ ಪರಿಣಾಮ ಕನಿಷ್ಠ 93 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ಸೇನೆ ಈ ದಾಳಿಯ ಹೊಣೆಹೊತ್ತಿದೆ.
ಆಶ್ರಯ ಪಡೆದಿದ್ದವರು ಶಾಲೆಯೊಳಗಿದ್ದ ಮಸೀದಿಯಲ್ಲಿ ನಸುಕಿನ ಜಾವ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಹಲವರು ಮಲಗಿದ್ದಾಗ ಮೂರು ಕ್ಷಿಪಣಿಗಳ ದಾಳಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರಲ್ಲಿ ಹಲವರ ಗುರುತು ಪತ್ತೆಮಾಡಲು ಸಾಧ್ಯವಾಗುತ್ತಿಲ್ಲ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
'ಮಸೀದಿಯಲ್ಲಿದ್ದವರೆಲ್ಲರೂ ಸಾವಿಗೀಡಾಗಿದ್ದಾರೆ' ಎಂದು ಸ್ಥಳೀಯ ನಿವಾಸಿ ಅಬು ವಾಸೀಮ್ ತಿಳಿಸಿದ್ದಾರೆ.
ಖಂಡನೆ: ದಾಳಿಯನ್ನು ಹಲವು ದೇಶಗಳು ಖಂಡಿಸಿವೆ.
ಈ ದಾಳಿಯಿಂದ ಶಾಂತಿ ಸ್ಥಾಪಿಸುವ ಪ್ರಯತ್ನಗಳಿಗೆ ಇಸ್ರೇಲ್ ಅಡ್ಡಿಪಡಿಸುತ್ತಿದೆ ಎಂದು ಜೋರ್ಡಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
'ಗಾಜಾದಲ್ಲಿ ಸಾಮೂಹಿಕ ಹತ್ಯೆ ನಡೆಯುವುದನ್ನು ತಡೆಯಬೇಕು' ಎಂದು ಸೌದಿ ಅರೇಬಿಯಾ ವಿದೇಶಾಂಗ ಸಚಿವಾಲಯ ತಿಳಿಸಿದೆ.