HEALTH TIPS

Bangladesh: 'ಜಮಾತ್-ಎ-ಇಸ್ಲಾಮಿ' ಪಕ್ಷದ ಮೇಲಿನ ನಿಷೇಧ ತೆರವು

           ಢಾಕಾ: 'ಜಮಾತ್-ಎ-ಇಸ್ಲಾಮಿ' ಪಕ್ಷದ ಮೇಲೆ ಹೇರಲಾಗಿದ್ದ ನಿಷೇಧವನ್ನು ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಅವರ ನೇತೃತ್ವದ ಮಧ್ಯಂತರ ಸರ್ಕಾರ ಬುಧವಾರ ತೆರವುಗೊಳಿಸಿದೆ.

            ಜಮಾತ್-ಎ-ಇಸ್ಲಾಮಿ ಪಕ್ಷವನ್ನು 'ಉಗ್ರವಾದಿ ಮತ್ತು ಭಯೋತ್ಪಾದಕ' ಸಂಘಟನೆ ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ನಿಷೇಧಿಸಿದ್ದರು.

         ಪಕ್ಷದ ಮೇಲಿನ ನಿಷೇಧವನ್ನು ಸರ್ಕಾರ ತೆರವುಗೊಳಿಸಿದ್ದು, ಅದು ತನ್ನ ಚಟುವಟಿಕೆಗಳನ್ನು ಪುನರಾರಂಭಿಸಬಹುದು ಎಂದು ಬಾಂಗ್ಲಾದ ಗೃಹ ಸಚಿವಾಲಯ ತಿಳಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಈ ಪಕ್ಷವನ್ನು ಚುನಾವಣೆಗಳಲ್ಲಿ ಭಾಗವಹಿಸದಂತೆ 2013ರಲ್ಲಿ ನಿಷೇಧಿಸಲಾಗಿತ್ತು.

           ಸಾಮರಸ್ಯ ಇರಲಿ: 'ಬಾಂಗ್ಲಾದೇಶ ಮತ್ತು ಭಾರತದ ಜತೆ ಸಾಮರಸ್ಯ ಮತ್ತು ಸ್ಥಿರವಾದ ಬಾಂಧವ್ಯ ಇರಬೇಕು ಎಂದು ತಮ್ಮ ಪಕ್ಷ ಬಯಸುತ್ತದೆ' ಎಂದು ಬಾಂಗ್ಲಾದೇಶದ ಜಮಾತ್-ಎ-ಇಸ್ಲಾಮಿ ಪಕ್ಷದ ಮುಖ್ಯಸ್ಥರಾದ ಶಫಿಕುರ್‌ ರಹಮಾನ್‌ ಪ್ರತಿಪಾದಿಸಿದ್ದಾರೆ.

          'ಪರಸ್ಪರ ಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂಬುದಕ್ಕೆ ಪೂರಕವಾಗಿ ಭಾರತವು ತನ್ನ ವಿದೇಶಾಂಗ ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ' ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

           'ಬಾಂಗ್ಲಾದೇಶವು ಭಾರತದ ಜತೆ ಉತ್ತಮ ಸಂಬಂಧ ಹೊಂದಿರಬೇಕು. ಅದರ ಜತೆಗೆ ಬಾಂಗ್ಲಾವು ಅಮೆರಿಕ, ಚೀನಾ, ಪಾಕಿಸ್ತಾನದ ಜತೆಗೂ ಸಮತೋಲಿತ ಸಂಬಂಧ ಹೊಂದಿರಬೇಕು ಎಂಬುದನ್ನು ಪಕ್ಷ ಬಯಸುತ್ತದೆ' ಎಂದಿದ್ದಾರೆ.

ಭಾರತ ವಿರೋಧಿಯಲ್ಲ

          'ಜಮಾತ್‌-ಎ-ಇಸ್ಲಾಮಿ'ಯು ಭಾರತ ವಿರೋಧಿ ಎಂಬ ಗ್ರಹಿಕೆಯನ್ನು ಭಾರತ ಹೊಂದಿದೆ. ಆದರೆ ಅದು ತಪ್ಪು ಕಲ್ಪನೆ. 'ಜಮಾತ್‌-ಎ-ಇಸ್ಲಾಮಿ' ಬಾಂಗ್ಲಾದೇಶ ಪರ ಇರುವಂತಹದ್ದಾಗಿದ್ದು, ಬಾಂಗ್ಲಾದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಮಾತ್ರ ಆಸಕ್ತಿ ಹೊಂದಿದೆ. ಅದು ಯಾವುದೇ ದೇಶಗಳ ವಿರೋಧಿ ಅಲ್ಲ' ಎಂದು ಅವರು ಹೇಳಿದ್ದಾರೆ.

'ಹಿಂದೂಗಳ ಮೇಲೆ ದಾಳಿ ಮಾಡಿಲ್ಲ'

           'ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವರ ಮೇಲಿನ ದಾಳಿಯಲ್ಲಿ ಪಕ್ಷ ಭಾಗಿಯಾಗಿಲ್ಲ. ಈ ರೀತಿಯ ಆರೋಪಗಳು ಆಧಾರರಹಿತ' ಎಂದು ಜಮಾತ್-ಎ-ಇಸ್ಲಾಮಿ ಪಕ್ಷದ ಮುಖ್ಯಸ್ಥರಾದ ಶಫಿಕುರ್‌ ರಹಮಾನ್‌ ಹೇಳಿದ್ದಾರೆ. 'ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ಪರಿಕಲ್ಪನೆಯಲ್ಲಿ ನಮಗೆ ನಂಬಿಕೆ ಇಲ್ಲ. ನಾವು ಏಕತೆಯಲ್ಲಿ ನಂಬಿಕೆ ಹೊಂದಿದ್ದೇವೆ. ಹಿಂದೂಗಳನ್ನು ಅಲ್ಪಸಂಖ್ಯಾತರೆಂದು ನಾವು ಪರಿಗಣಿಸಿಲ್ಲ. ಬದಲಿಗೆ ಅವರು ನಮ್ಮ ಸಹೋದರರು ಮತ್ತು ಸ್ನೇಹಿತರೆಂದು ಭಾವಿಸಿದ್ದೇವೆ' ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಬಾರದಿತ್ತು ಎಂದಿರುವ ಅವರು ಹಸೀನಾ ಅವರು ಬಾಂಗ್ಲಾದೇಶಕ್ಕೆ ಹಿಂದಿರುಗಿ ಕಾನೂನನ್ನು ಎದುರಿಸಬೇಕು ಎಂದು ಸಲಹೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries