HEALTH TIPS

ಭಾರತದಲ್ಲಿ ನೇಮಕಾತಿ | ಐಎಸ್‌ಐಎಲ್‌ ಉಗ್ರ ಸಂಘಟನೆ ಯತ್ನ: ವಿಶ್ವಸಂಸ್ಥೆ ವರದಿ

            ವಿಶ್ವಸಂಸ್ಥೆ: ಭಯೋತ್ಪಾದಕ ಸಂಘಟನೆಯಾದ ಐಎಸ್‌ಐಎಲ್‌-ಕೆ (ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆಯಂಡ್ ದಿ ಲೇವಂತ್ - ಖೊರಾಸಾನ್) ಭಾರತದಲ್ಲಿ ಇರುವ ತನ್ನ ಬೆಂಬಲಿಗರ ನೆರವಿನಿಂದ, ಒಬ್ಬಂಟಿಯಾಗಿ ಕೆಲಸ ಮಾಡುವವರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.

           ದೇಶದಲ್ಲಿ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲು ಈ ಭಯೋತ್ಪಾದಕ ಸಂಘಟನೆಗೆ ಸಾಧ್ಯವಾಗದೆ ಇದ್ದರೂ, ಅದು ಈ ಮಾರ್ಗ ಅನುಸರಿಸಲು ಮುಂದಾಗಿದೆ ಎಂದು ವರದಿಯು ಎಚ್ಚರಿಸಿದೆ.

                'ಸಂಘಟನೆಯು ಉರ್ದು ಭಾಷೆಯಲ್ಲಿ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ್ದು, ಹಿಂದೂ-ಮುಸ್ಲಿಂ ಭಿನ್ನಮತವನ್ನು ಭಾರಿ ದೊಡ್ಡದಾಗಿ ತೋರಿಸುವ ಕೆಲಸ ಮಾಡಿದೆ' ಎಂದು ವಿಶ್ವಸಂಸ್ಥೆಯ ವರದಿಯು ಹೇಳಿದೆ. ಈ ಪ್ರದೇಶದಲ್ಲಿ ಐಎಸ್‌ಐಎಲ್‌-ಕೆ ಸಂಘಟನೆಯು ಬಹಳ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries