ಕೋಲ್ಕತ್ತ: ಇಂಡೋ-ಬಾಂಗ್ಲಾ ಗಡಿಯಲ್ಲಿ ಭದ್ರತೆಗೆ ನಿಂತಿದ್ದ ಬಿಎಸ್‌ಎಫ್ ಮಹಿಳಾ ಸಿಬ್ಬಂದಿ ಮೇಲೆ ಬಾಂಗ್ಲಾದೇಶದಿಂದ ಒಳನುಸುಳಲು ಯತ್ನಿಸುವವರ ಗೊಂಪೊಂದು ದಾಳಿ ನಡೆಸಿದೆ. ಮಹಿಳಾ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅರೆಸೇನಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರ ಬೆಳಿಗ್ಗೆ 13-14 ಜನ ಬಾಂಗ್ಲಾದೇಶದ ಗಡಿಯನ್ನು ಅಕ್ರಮವಾಗಿ ದಾಟಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದರು. ಇದನ್ನು ಕಂಡ ಮಹಿಳಾ ಸಿಬ್ಬಂದಿ ಅವರ ಬಳಿ ತೆರಳಿ ಮಾತಿನಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಅವರು ಒತ್ತಾಯಪೂರ್ವಕವಾಗಿ ಒಳಬರಲು ಯತ್ನಿಸಿದರು. ಅವರನ್ನು ತಡೆಯುವ ವೇಳೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡಿ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ತಕ್ಷಣವೇ ಹತ್ತಿರವಿದ್ದ ಸೈನಿಕರು ಗ್ರೆನೇಡ್‌ಗಳನ್ನು ಎಸೆದಿದ್ದಾರೆ. ಜತೆಗೆ ಒಂದು ಸುತ್ತು ಗುಂಡನ್ನೂ ಹಾರಿಸಿ ಒಳನುಸುಳುವಿಕೆಯನ್ನು ತಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.