ಕಾಸರಗೋಡು: ಡಾ. ಕೆ. ವಿ. ಜಲಜಾಕ್ಷಿ ಸಂಸ್ಮರಣ ಪ್ರತಿಷ್ಠಾನ ಮತ್ತು ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕನ್ನಡ ಕಥಾ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ದ್ವಿತೀಯ ಎಂ.ಎ. ಕನ್ನಡ ವಿದ್ಯಾರ್ಥಿನಿ ಜ್ಯೋತಿರ್ಲಕ್ಷ್ಮಿ ಅವರ ‘ಮೊಲೆ ಮುಡಿ ಬಂದರೆ’ ಕಥೆಗೆ ದ್ವಿತೀಯ ಬಹುಮಾನ ಲಭಿಸಿದೆ. ಬಹುಮಾನವು 2500-ರೂ ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.