ಬದಿಯಡ್ಕ: ಕುಂಬಡಾಜೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಾರೆಗದ್ದೆ ನಿವಾಸಿ ರಾಘವನ್ ಎಂಬವರ ಪತ್ನಿ ಸರಸ್ವತಿ ಎಂಬವರು ಅರ್ಬುದ ರೋಗ ಬಾಸಿ ಚಿಕಿತ್ಸೆಯಲ್ಲಿದ್ದಾರೆ. ತೀವ್ರ ಬಡತನದ ನಡುವೆ ಬಾಧಿಸಿದ ರೋಗದ ಚಿಕಿತ್ಸೆಗೆ ದಾನಿಗಳ ನೆರವಿನ ಅಗತ್ಯವಿದೆ. ಅಸೌಖ್ಯದಲ್ಲಿರುವ ಓರ್ವ ಪುತ್ರನ ಹಾಗೂ ಪತ್ನಿಯ ಚಿಕಿತ್ಸೆಗಾಗಿ ಹಣಜೋಡಿಸುವಲ್ಲಿ ಪತಿ ರಾಘವನ್ ಸೋತುಹೋಗಿದ್ದಾರೆ. ತಲಶ್ಶೇರಿ ಎಂ.ಸಿ.ಸಿ.ಯಲ್ಲಿ ಸರಸ್ವತಿ ಚಿಕಿತ್ಸೆಯಲ್ಲಿದ್ದಾರೆ. ಇವರ ಚಿಕಿತ್ಸೆಗೆ ಸುಮಾರು 10 ಲಕ್ಷರೂಗಳ ಅಗತ್ಯವಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಕುಟುಂಬಕ್ಕೆ ಸಹಾಯಕವಾಗಿ ಊರವರು ಸಮಿತಿ ರಚಿಸಿದ್ದಾರೆ.
ಸರಸ್ವತಿ ಚಿಕಿತ್ಸಾ ಸಹಾಯ ನಿಧಿಯ ಪ್ರಥಮ ಸಭೆ ಉಬರಂಗಳ ಶ್ರೀ ಶಾಸ್ತಾ ಸಿಂಗಾರಿ ಮೇಳದ ಕಟ್ಟಡದಲ್ಲಿ ಗುರುವಾರ ಜರಗಿತು. ಕುಂಬಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೆÇಸಳಿಗೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಆನಂದ ಕೆ ಮವ್ವಾರು ಚಿಕಿತ್ಸೆಯ ಕುರಿತು ಮಾಹಿತಿಯನ್ನು ನೀಡಿದರು. ವಾರ್ಡ್ ಸದಸ್ಯೆ ಮಾಶಿದ ಮಜೀದ್, ಸಿ ಡಿ ಎಸ್ ಅಧ್ಯಕ್ಷೆ ರೋಶಿನಿ ಪೆÇಡಿಪ್ಪಳ, ಸುವರ್ಣ ಮಾಸ್ತರ್, ಜಯರಾಜ್ ಕುಣಿಕುಳ್ಳಾಯ ಉಪಸ್ಥಿತರಿದ್ದರು. ಊರ ಪರವೂರ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿ ಸಹಾಯವನ್ನು ನೀಡುವ ಭರವಸೆ ನೀಡಿದರು. ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ರಾಜೇಶ್ ಮಾಸ್ತರ್ ಆಗಲ್ಪಾಡಿ ವಂದಿಸಿದರು.
ಸರಸ್ವತಿ ಚಿಕಿತ್ಸಾ ಸಹಾಯ ನಿಯ ಪದಾಧಿಕಾರಿಗಳಾಗಿ ಆನಂದ ಕೆ ಮವ್ವಾರು, ಅಶೋಕ ಮಾಸ್ತರ್ ಆಗಲ್ಪಾಡಿ, ಹಮೀದ್ ಪೆÇಸಳಿಗೆ, ಸಹ ಸಂಚಾಲಕರಾಗಿ ಸಾಶಿದ ಮಜೀದ್, ಮೀನಾಕ್ಷಿ ಸುಧಾಕರ ರಾಜನ್ ಅಗಲ್ಪಾಡಿ, ರಾಜೇಶ್ ಮಾಸ್ತರ್ ಆಗಲ್ಪಾಡಿ, ಜಗದೀಶ್ ಪಂಜರಿಕೆ, ಶಶಿಧರ ತೆಕ್ಕೆಮೂಲೆ ಹಾಗೂ ಸಭೆಯಲ್ಲಿ ಪಾಲ್ಗೊಂಡವರನ್ನು ಸದಸ್ಯರನ್ನಾಗಿ ಆರಿಸಲಾಯಿತು.