ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಮೊಬೈಲ್ ಚಟ ವಿಪರೀತವಾಗಿ ಹೆಚ್ಚುತ್ತಿದೆ. ನಿಮ್ಮ ಮಕ್ಕಳಿಗೂ ಮೊಬೈಲ್ ಅಭ್ಯಾಸವಿದ್ದರೆ ಅದನ್ನ ನಿಲ್ಲಿಸಲು ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಮೊಬೈಲ್ ಅಭ್ಯಾಸವು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಒಮ್ಮೆ ಮಕ್ಕಳು ಮೊಬೈಲ್'ಗೆ ಒಗ್ಗಿಕೊಂಡರೆ ಅವರನ್ನ ಕೂರಿಸುವುದು ತುಂಬಾ ಕಷ್ಟ. ಆದ್ರೆ, ಅನೇಕ ಪೋಷಕರು ತಮ್ಮ ಮಗು ಇಡೀ ದಿನ ಮೊಬೈಲ್'ನಲ್ಲಿ ಮುಳುಗಿರುತ್ತೆ ಎಂದು ಹೇಳುತ್ತಾರೆ.
ಕೆಲವು ಪಾಲಕರು ಕೂಡ ದಿನವಿಡೀ ಮೊಬೈಲ್'ನಲ್ಲಿ ಬ್ಯುಸಿಯಾಗಿರುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಬದಲು, ಮೊಬೈಲ್ ಅಭ್ಯಾಸವಾಗುತ್ತದೆ. ಇದನ್ನು ನೋಡಿ ಮಕ್ಕಳಿಗೂ ಮೊಬೈಲ್ ಕೆಟ್ಟ ಚಟಗಳು ಬರುತ್ತವೆ. ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೆಲವೊಮ್ಮೆ ಮಕ್ಕಳು ರಹಸ್ಯವಾಗಿ ಮೊಬೈಲ್ ಫೋನ್ ಬಳಸುತ್ತಾರೆ. ಮಕ್ಕಳಲ್ಲಿರುವ ಮೊಬೈಲ್ ಚಟವನ್ನ ಹೋಗಲಾಡಿಸಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು ಎನ್ನುತ್ತಾರೆ ತಜ್ಞರು.
ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮೊಬೈಲ್ ಕೊಡಬೇಡಿ : ಮೊದಲನೆಯದಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡಬೇಡಿ. ನಿಮ್ಮ ಮಗು ನಿಮ್ಮೊಂದಿಗಿರುವಾಗ ಮೊಬೈಲ್ ನಿಂದ ಆದಷ್ಟು ದೂರವಿರಿ. ಏಕೆಂದರೆ ನೀವು ಮೊಬೈಲ್'ನಲ್ಲಿ ಬ್ಯುಸಿಯಾಗಿದ್ದರೆ ಮಕ್ಕಳು ಕೂಡ ನಿಮ್ಮನ್ನು ನೋಡಿದ ನಂತರ ಮೊಬೈಲ್ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಮಕ್ಕಳು ಒಗ್ಗಿಕೊಳ್ಳುತ್ತಾರೆ.
ಊಟ ಮಾಡುವಾಗ ಮೊಬೈಲ್ ಕೊಡಬೇಡಿ: ಹಾಗೆಯೇ ಮಕ್ಕಳು ಊಟ ಮಾಡುವಾಗ ಮೊಬೈಲ್ ಕೊಡಬೇಡಿ. ಹಾಗೆ ಮಾಡಿದರೆ ಪ್ರತಿ ಬಾರಿ ಊಟಕ್ಕೂ ಮುನ್ನ ಮೊಬೈಲ್ ಕೊಡಬೇಕು. ಇಲ್ಲದಿದ್ದರೆ ಅವರು ತಿನ್ನುವುದಿಲ್ಲ. ಆದ್ದರಿಂದ ಮೊದಲೇ ಮೊಬೈಲ್ ದೂರವಿಡಿ.
ಆಟಗಳತ್ತ ಗಮನಹರಿಸಿ: ಮಕ್ಕಳನ್ನು ಮೊಬೈಲ್ ಫೋನ್'ಗಳಿಂದ ದೂರವಿಡುವುದೇ ಉತ್ತಮ ಪರಿಹಾರವಾಗಿದೆ. ಹೊರಾಂಗಣ ಆಟಗಳು ಅಥವಾ ಚಟುವಟಿಕೆಗಳಲ್ಲಿ ಅವರನ್ನ ತೊಡಗಿಸಿಕೊಳ್ಳಿ. ನೀವು ಮಗುವನ್ನು ಸೈಕ್ಲಿಂಗ್'ಗೆ ಕರೆದೊಯ್ಯಬಹುದು.
ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ: ನಿಮ್ಮ ಮೊಬೈಲ್'ನಲ್ಲಿ ಕೆಲಸ ಮುಗಿದ ನಂತರ ನೀವು ಇಂಟರ್ನೆಟ್ ಅಥವಾ ವೈಫೈ ಆಫ್ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳು ಮೊಬೈಲ್ ಬಳಸುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ನಿಮ್ಮ ಮಕ್ಕಳು ಮೊಬೈಲ್ ಬಳಸದಂತೆ ನಿಮ್ಮ ಮೊಬೈಲ್'ನಲ್ಲಿ ಪಾಸ್‌ವರ್ಡ್ ಇರಿಸಿ.
ಮೊಬೈಲ್ ಕಿತ್ತುಕೊಳ್ಳಬೇಡಿ : ಮಗುವಿನ ಕೈಯಲ್ಲಿ ಫೋನ್ ಕಂಡರೆ ತಕ್ಷಣ ತೆಗೆದುಕೊಂಡು ಹೋಗಬೇಡಿ. ಇದರಿಂದ ನಿಮ್ಮ ಮಗುವಿಗೆ ಕೋಪ ಬರುತ್ತದೆ. ಶಾಂತವಾಗಿ ವಿವರಿಸಿ ಮತ್ತು ಅವರಿಂದ ಫೋನ್ ತೆಗೆದುಕೊಳ್ಳಿ.
ಟಿವಿ ವೀಕ್ಷಣೆಗೂ ಸಮಯ ಕೊಡಿ : ಮನೆಯಲ್ಲಿ ಮಕ್ಕಳು ಟಿವಿ ನೋಡುವ ಮೂಲಕ, ಪುಸ್ತಕಗಳನ್ನು ಓದುವ, ಸ್ಪೀಕರ್'ನಲ್ಲಿ ಹಾಡುಗಳನ್ನು ಕೇಳುವ ಮೂಲಕ ಮನರಂಜಿಸಲು ಪ್ರೋತ್ಸಾಹಿಸಿ. ನಿಮ್ಮ ಮಕ್ಕಳು ಸ್ಮಾರ್ಟ್ ಟಿವಿ ವೀಕ್ಷಿಸಲು ನೀವು ಸಮಯವನ್ನ ನಿಗದಿಪಡಿಸಬಹುದು. ಆದ್ರೆ, ಎಚ್ಚರ ಹೆಚ್ಚು ಟಿವಿ ನೋಡುವುದರಿಂದ ಮಕ್ಕಳ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ.