ನವದೆಹಲಿ: ಈ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಲಾ ನಿನಾ ಪರಿಸ್ಥಿತಿಗಳು ಏರ್ಪಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ತಿಳಿಸಿದೆ.
ಕೃಷಿ ಪ್ರಧಾನ ದೇಶವಾದ ಭಾರತಕ್ಕೆ ಮುಂಗಾರು ಮಳೆ ನಿರ್ಣಾಯಕವಾಗಿದೆ, ನಿವ್ವಳ ಕೃಷಿ ಪ್ರದೇಶದ ಶೇಕಡಾ 52ರಷ್ಟು ಭಾಗ ಮಳೆಯ ಮೇಲೆ ಅವಲಂಬಿತವಾಗಿದೆ. ದೇಶದಾದ್ಯಂತ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ನಿರ್ಣಾಯಕವಾದ ಜಲಾಶಯಗಳನ್ನು ಮರುಪೂರಣಗೊಳಿಸಲು ಪ್ರಾಥಮಿಕ ಮಳೆ ಸುರಿಯುವಿಕೆ ಸಹ ನಿರ್ಣಾಯಕವಾಗಿದೆ.
ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಭಾರತದಾದ್ಯಂತ ಮಳೆಯು ದೀರ್ಘಾವಧಿಯ ಸರಾಸರಿ 422.8 ಮಿಮೀನಷ್ಟು ಸುರಿಯಲಿದೆ, ಅಂದರೆ ಶೇಕಡಾ 106 ರಷ್ಟು ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 1 ರಿಂದ ಸಾಮಾನ್ಯ 445.8 ಮಿಮೀ ವಿರುದ್ಧ ದೇಶವು ಇಲ್ಲಿಯವರೆಗೆ 453.8 ಮಿಮೀ ಮಳೆ ಕಂಡಿದೆ. ಜೂನ್ 1 ರಿಂದ ಎರಡು ಶೇಕಡಾ ಹೆಚ್ಚುವರಿ, ತೇವದ ವಾತಾವರಣ ಕೂಡ ಇರುತ್ತದೆ.
ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಈಶಾನ್ಯ ಭಾಗಗಳು, ಪಕ್ಕದ ಪೂರ್ವ ಭಾರತ, ಲಡಾಖ್, ಸೌರಾಷ್ಟ್ರ, ಕಚ್ , ಮಧ್ಯ ಮತ್ತು ಪರ್ಯಾಯ ಭಾರತದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪಶ್ಚಿಮ ಹಿಮಾಲಯದ ಭಾಗದಲ್ಲಿ ಮಳೆ ಕೊರತೆಯುಂಟಾಗಬಹುದು. ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಗಂಗಾ ಬಯಲು ಪ್ರದೇಶ, ಮಧ್ಯ ಭಾರತ, ಭಾರತದ ಆಗ್ನೇಯ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ ಎಂದು ಮೊಹಾಪಾತ್ರ ಹೇಳಿದರು.
ಜುಲೈನಲ್ಲಿ ಭಾರತವು ಸಾಮಾನ್ಯಕ್ಕಿಂತ ಶೇಕಡಾ 9ರಷ್ಟು ಹೆಚ್ಚು ಮಳೆಯನ್ನು ಕಂಡಿದೆ. ಮಧ್ಯ ಪ್ರದೇಶದಲ್ಲಿ ಶೇಕಡಾ 33ರಷ್ಟು ಅಧಿಕ ಮಳೆಯಾಗಿದೆ.
ಕೃಷಿಗೆ ಮುಂಗಾರು ಮಳೆಯನ್ನೇ ಹೆಚ್ಚು ಅವಲಂಬಿಸಿರುವ ಮಧ್ಯ ಭಾರತದಲ್ಲಿ ಸತತ ಮೂರನೇ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿಗೆ ಅನುಕೂಲವಾಗಿದೆ. ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗಂಗಾ ಪಶ್ಚಿಮ ಬಂಗಾಳ ಮತ್ತು ಈಶಾನ್ಯದ ಭಾಗಗಳಲ್ಲಿ ಮಳೆ ಕೊರತೆ ಕಾಣಲಿದೆ. ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯ ಕೊರತೆಯು ಶೇ.35 ರಿಂದ ಶೇ.45 ರಷ್ಟಿದೆ.
ಭಾರತೀಯ ಮಾನ್ಸೂನ್ ವಿವಿಧ ನೈಸರ್ಗಿಕ ಅಂಶಗಳಿಂದಾಗಿ ಕಾಲಾನಂತರದಲ್ಲಿ ಸಂಭವಿಸುವ ಅಂತರ್ಗತ ಏರಿಳಿತಗಳು ಮತ್ತು ಬದಲಾವಣೆಗಳಿಂದ ನಿರೂಪಿಸಲ್ಪಟ್ಟಿದೆ. ಇದನ್ನು ನೈಸರ್ಗಿಕ ವ್ಯತ್ಯಾಸ ಎಂದು ಕರೆಯಲಾಗುತ್ತದೆ.