ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಎಂ. ಎಸ್ ಸಿ ಸ್ಟಾಟಿಸ್ಟಿಕ್ಸ್ ಪದವಿ ಕೋರ್ಸ್ ನಲ್ಲಿ ಜನರಲ್- 4, ಮುಸ್ಲಿಂ- 1, ಈಳವ- 1, ಎಸ್ ಸಿ- 2, ಎಸ್ ಟಿ- 1, ಇ ಡಬ್ಲ್ಯೂ ಎಸ್- 1 ಎಂಬೀ ವಿಭಾಗಗಳಲ್ಲಿ ಸೀಟುಗಳು ಖಾಲಿಯಿವೆ. ಅರ್ಹರಾದ ಆಸಕ್ತ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳ ಸಹಿತ ಆಗಸ್ಟ್ 30 ರಂದು ಅಪರಾಹ್ನ 3 ಗಂಟೆಗೆ ಮುಂಚಿತವಾಗಿ ಕಾಲೇಜು ಕಚೇರಿಯಲ್ಲಿ ಹೆತ್ತವರ ಜೊತೆಗೆ ಹಾಜರಾಗಬೇಕು ಎಮದು ಸೂಚಿಸಲಾಗಿದೆ.
ಪ್ರಥಮ ವರ್ಷ ಎಂ.ಕಾಂ ಪದವಿ ಕೋರ್ಸ್ ನಲ್ಲಿ ಎಸ್ ಸಿ ವಿಭಾಗದಲ್ಲಿ ಒಂದು ಸೀಟು ಖಾಲಿಯಿದೆ. ಅರ್ಹರಾದ ಆಸಕ್ತ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳ ಸಹಿತ ಆಗಸ್ಟ್ 30 ರಂದು ಅಪರಾಹ್ನ 3 ಗಂಟೆಗೆ ಮುಂಚಿತವಾಗಿ ಕಾಲೇಜು ಕಚೇರಿಯಲ್ಲಿ ಹೆತ್ತವರ ಜೊತೆಗೆ ಹಾಜರಾಗಬೇಕು ಎಂದೂ ಸೂಚಿಸಲಾಗಿದೆ.