HEALTH TIPS

ರಷ್ಯಾ-ಉಕ್ರೇನ್ ಬಿಕ್ಕಟ್ಟು ನಿವಾರಣೆಗೆ ಭಾರತದ ಪಾತ್ರ ಮಹತ್ವದ್ದು: ಝೆಲೆಸ್ಕಿ

          ಕೀವ್‌: 'ರಷ್ಯಾ- ಉಕ್ರೇನ್ ಬಿಕ್ಕಟ್ಟು ಬಗೆಹರಿಸಿ ಶಾಂತಿ ಸ್ಥಾಪಿಸುವ ಜಾಗತಿಕ ರಾಜತಾಂತ್ರಿಕ ಪ್ರಯತ್ನದಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ' ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರು ಅಭಿಪ್ರಾಯಪಟ್ಟಿದ್ದಾರೆ.

           'ಶಂಕಾಸ್ಪದ ರಾಷ್ಟ್ರಗಳ ವರ್ತುಲದ ಈ ಜಗತ್ತಿನಲ್ಲಿ ಭಾರತವು ಬೃಹತ್ ಪ್ರಭಾವಿ ರಾಷ್ಟ್ರವಾಗಿದೆ.

ಯುದ್ಧ ಮತ್ತು ರಷ್ಯಾ ಕುರಿತು ಭಾರತ ತನ್ನ ದೃಷ್ಟಿಕೋನವನ್ನು ಬದಲಿಸಿದಲ್ಲಿ, ನಾವು ಈ ಯುದ್ಧ ನಿಲ್ಲಿಸಬಹುದು. ಆಗ ಪುಟಿನ್‌ ಕೂಡಾ ಯುದ್ಧ ನಿಲ್ಲಿಸಲು ಬಯಸುತ್ತಾರೆ' ಎಂದು ಝೆಲೆನ್ ಸ್ಕಿ ಪ್ರತಿಪಾದಿಸಿದರು.

            ಇಲ್ಲಿ, ಭಾರತದ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಸಂವಾದ ನಡೆಸಿದ ಅವರು, 'ಉಕ್ರೇನ್‌ಗೆ ಮೋದಿ ಅವರ ಭೇಟಿ ಚಾರಿತ್ರಿಕವಾದುದು. ರಷ್ಯಾ ಮತ್ತು ಅಮೆರಿಕ ನಡುವೆ ಸಮತೋಲನ ಸಾಧಿಸುವ ಬದಲು ನಿಮ್ಮ ರಾಷ್ಟ್ರವು ನಮ್ಮ ಜೊತೆಗೆ ಇರಬೇಕು ಎಂದೇ ನಾನು ಬಯಸುತ್ತೇನೆ' ಎಂದು ಸ್ಪಷ್ಟಪಡಿಸಿದರು.

           'ರಾಜತಾಂತ್ರಿಕ ಚರ್ಚೆ ಒಮ್ಮೆ ಆರಂಭವಾದರೆ ಮುಂದುವರಿಯಲಿದೆ. ಸಮಯ ವ್ಯರ್ಥವಾಗದು. ಮತ್ತೆ, ಮತ್ತೆ ಭೇಟಿ ಮಾಡುತ್ತೇವೆ. ಇದು, ಭಾರತದ ಐತಿಹಾಸಿಕ ಆಯ್ಕೆಯ ಪ್ರಶ್ನೆಯಲ್ಲ. ನಿಮ್ಮ ದೇಶ ರಾಜತಾಂತ್ರಿಕ ಪ್ರಭಾವ ಹೊಂದಿರಬಹುದು. ನಿಮ್ಮ ಪ್ರಧಾನಿ, ನಿಮ್ಮ ಸರ್ಕಾರ ಬಯಸಿದ ಸಂದರ್ಭದಲ್ಲಿ ನಾನು ನಿಮ್ಮ ದೇಶಕ್ಕೆ ಭೇಟಿ ನೀಡಲು ಸಿದ್ಧನಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

                ಆದರೆ, ಗಡಿ ಕುರಿತ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ನಮ್ಮ ಗಡಿ, ನಮ್ಮ ಸಿದ್ದಾಂತ, ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಕುರಿತ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉಕ್ರೇನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಶಾಂತಿ ಸ್ಥಾಪನೆಯ ಕ್ರಮವಾಗಿ ಸಮಯ ವ್ಯರ್ಥ ಮಾಡದೇ ಉಕ್ರೇನ್‌ ಮತ್ತು ರಷ್ಯಾ ಅಧ್ಯಕ್ಷರು ಪರಸ್ಪರ ಕುಳಿತು ಚರ್ಚಿಸಬೇಕು ಎಂದು ಸಲಹೆ ಮಾಡಿದ್ದರು.

            ಉಕ್ರೇನ್‌ 1991ರಲ್ಲಿ ಸ್ವತಂತ್ರ ರಾಷ್ಟ್ರವಾದ ಬಳಿಕ ಭೇಟಿ ನೀಡಿದ ಭಾರತದ ಪ್ರಥಮ ಪ್ರಧಾನಿಯಾದ ಮೋದಿ, ಸುಮಾರು 9 ಗಂಟೆ ಕಾಲ ಉಕ್ರೇನ್‌ನಲ್ಲಿ ಇದ್ದರು. ಮಾಸ್ಕೊಗೆ ಭೇಟಿ ನೀಡಿದ್ದ ಆರು ತಿಂಗಳ ತರುವಾಯ ಉಕ್ರೇನ್‌ಗೆ ಅವರು ಭೇಟಿ ನೀಡಿದ್ದರಿಂದಾಗಿ ಈ ಭೇಟಿಯು ಜಗತ್ತಿನ ಗಮನಸೆಳೆದಿತ್ತು.

    ಭಾರತದಲ್ಲಿ ಶಾಂತಿ ಶೃಂಗಸಭೆ; ಝೆಲೆನ್‌ ಸ್ಕಿ ಸಲಹೆ

            ಕೀವ್: 'ದ್ವಿತೀಯ ಉಕ್ರೇನ್‌ ಶಾಂತಿ ಶೃಂಗಸಭೆ ಆಯೋಜಿಸಲು ಸೂಕ್ತವಾದ ದಕ್ಷಿಣದ ರಾಷ್ಟ್ರಗಳಲ್ಲಿ ಭಾರತವೂ ಒಂದು' ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಸದ್ಯ, ಉಕ್ರೇನ್‌ನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂ ಈ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಸೌದಿ ಅರೇಬಿಯಾ, ಕತಾರ್‌, ಟರ್ಕಿ ರಾಷ್ಟ್ರಗಳು ಚಿಂತನೆಯಲ್ಲಿವೆ ಎಂದರು.

ಆದರೆ, ಇದೇ ಸಂದರ್ಭದಲ್ಲಿ ಪ್ರಥಮ ಶಾಂತಿ ಶೃಂಗದ ಘೋಷಣೆಗೆ ಸಹಮತ ವ್ಯಕ್ತಪಡಿಸದಿರುವ ರಾಷ್ಟ್ರದಲ್ಲಿ ಶೃಂಗಸಭೆ ಆಯೋಜನೆ ಸಾಧ್ಯವಿಲ್ಲ ಎಂದು ಝೆಲೆನ್ ಸ್ಕಿ ಪ್ರತಿಪಾದಿಸಿದ್ದಾರೆ.

ಭಾರತವು ಮೊದಲ ಶಾಂತಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೂ, ಘೋಷಣೆಗೆ ಸಹಮತ ವ್ಯಕ್ತಪಡಿಸಿರಲಿಲ್ಲ. ಉಕ್ರೇನ್‌ ಬಿಕ್ಕಟ್ಟು ಬಗೆಹರಿಸಲು ಎಲ್ಲ ಭಾಗಿದಾರರ ಜೊತೆಗೂ ಸಂಪ‍ರ್ಕದಲ್ಲಿರುವುದಾಗಿ ಪ್ರತಿಪಾದಿಸಿತ್ತು.

             ಪ್ರಥಮ ಉಕ್ರೇನ್‌ ಶಾಂತಿ ಶೃಂಗಸಭೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಜೂನ್‌ ತಿಂಗಳಲ್ಲಿ ನಡೆದಿತ್ತು. ಉಕ್ರೇನ್‌ನಲ್ಲಿ ‌ಶಾಂತಿ ಸ್ಥಾಪನೆಗೆ ಪ್ರತಿಪಾದಿಸುತ್ತಿರುವ 90ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries