ತಿರುವನಂತಪುರಂ: ದಿ ಗೋಟ್ ಲೈಫ್ ಸಿನಿಮಾ ಮಾರ್ಚ್‌ನಲ್ಲಿ ಥಿಯೇಟರ್‌ಗಳಲ್ಲಿ ಮತ್ತು ಜುಲೈನಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ನಜೀಬ್ ಪಾತ್ರಧಾರಿಯಾಗಿ ನಟಿಸಿದ ಪೃಥ್ವಿರಾಜ್ ಸುಕುಮಾರನ್ ಹಲವರ ಮೆಚ್ಚುಗೆಗೆ ಪಾತ್ರರಾದರು. ಈ ಸಿನಿಮಾವು ಇತ್ತೀಚೆಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಿರ್ದೇಶಕ, ಚಿತ್ರಕಥೆ (ಹೊಂದಾಣಿಕೆ), ನಟ, ಸಿನಿಮಾ ಮತ್ತು ಛಾಯಾಗ್ರಹಣ ಸೇರಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿದೆ.
ಸದ್ಯ ಈ ಸಿನಿಮಾ ಬಗ್ಗೆ ನಿರ್ದೇಶಕ ಬ್ಲೆಸ್ಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಮಾಡಿದ್ದಾರೆ. ಪೋಸ್ಟ್ನಲ್ಲಿ ದಿ ಗೋಟ್ ಲೈಫ್ ಸಿನಿಮಾವನ್ನು ಕಲಾಕೃತಿಯಾಗಿ ಮಾತ್ರ ಪರಿಗಣಿಸಬೇಕು. ಯಾವುದೇ ವ್ಯಕ್ತಿ, ಜನಾಂಗ ಅಥವಾ ದೇಶದ ಭಾವನೆಗಳಿಗೆ ಧಕ್ಕೆ ತರುವುದು ಚಿತ್ರದ ಉದ್ದೇಶವಲ್ಲ ಎಂದು ತಿಳಿಸಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾದ ಬೆಂಜಮಿನ್ ಅವರ ಹೆಚ್ಚು ಮಾರಾಟವಾದ ಮಲಯಾಳಂ ಕಾದಂಬರಿಯ ಆಧಾರಿತ ಸಿನಿಮಾವಾಗಿದೆ. ಸಿನಿಮಾವು ಕಠೋರ ವ್ಯಕ್ತಿಯ ಹೃದಯದಲ್ಲಿ ದೇವರ ಮೇಲಿನ ನಂಬಿಕೆ ಬಲಗೊಳ್ಳುವ ಮತ್ತು ದೇವರು ಮೊದಲು ಇಬ್ರಾಹಿಂ ಖಾದ್ರಿಯ ರೂಪದಲ್ಲಿ ಬಳಿಕ ರೋಲ್ಸ್ ರಾಯ್ಸ್‌ನೊಂದಿಗೆ ಉದಾತ್ತ ಅರಬ್ ಸಂಭಾವಿತ ವ್ಯಕ್ತಿಯ ರೂಪದಲ್ಲಿ ಅವನ ಬಳಿಗೆ ಬರುತ್ತಾನೆ ಎಂದು ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಿನಿಮಾದಲ್ಲಿನ ಸೌದಿಯರ ಚಿತ್ರಣದ ಬಗ್ಗೆ ಅರೇಬಿಯಾದಲ್ಲಿ ಟೀಕೆಗಳು ವ್ಯಕ್ತವಾದ ಬಳಿಕ, ಹಾಗೂ ಸಿನಿಮಾದಲ್ಲಿ ನಟಿಸಿರುವ ಒಮಾನಿ ನಟ ತಾಲಿಬ್ ಅಲ್ ಬಲೂಶಿ ಅವರನ್ನು ಸರ್ಕಾರಿ ಅಧಿಕಾರಿಗಳು ಸೌದಿ ಅರೇಬಿಯಾ ಪ್ರವೇಶಿಸುವುದನ್ನು ನಿರ್ಬಂಧಿಸಿದ ನಂತರ ವಿಷಯ ಉಲ್ಬಣಗೊಂಡಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ದಿ ಗೋಟ್ ಲೈಫ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕವೂ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.