ಥಾಣೆ: ಮದುವೆಗೆ ನಿರಾಕರಿಸಿದ ಬಾಯ್‌ಫ್ರೆಂಡ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ 26 ವರ್ಷದ ಮಹಿಳೆ, ಆತನ ಮರ್ಮಾಂಗವನ್ನು ಗಾಯಗೊಳಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಥಾಣೆ: ಮದುವೆಗೆ ನಿರಾಕರಿಸಿದ ಬಾಯ್‌ಫ್ರೆಂಡ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ 26 ವರ್ಷದ ಮಹಿಳೆ, ಆತನ ಮರ್ಮಾಂಗವನ್ನು ಗಾಯಗೊಳಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಭಿವಂಡಿಯಲ್ಲಿ ಆಗಸ್ಟ್ 16ರಂದು ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪದ್ಮ ನಗರದಲ್ಲಿರುವ ತನ್ನ ನಿವಾಸದಲ್ಲಿ ಮಹಿಳೆಯು 31 ವರ್ಷದ ಬಾಯ್‌ಫ್ರೆಂಡ್ ಮೇಲೆ ತರಕಾರಿ ಕತ್ತರಿಸುವ ಚಾಕುವಿನಿಂದ ದಾಳಿ ಮಾಡಿದ್ದಾಳೆ. ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಬಾಯ್‌ಫ್ರೆಂಡ್ ಮರ್ಮಾಂಗಕ್ಕೆ ಚಾಕುವಿನಿಂದ ಇರಿದಿರುವ ಮಹಿಳೆ ಗಂಭೀರವಾಗಿ ಗಾಯಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಮನೆಯಿಂದ ಓಡಿ ಬಂದ ಬಾಯ್‌ಫ್ರೆಂಡ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಚಿಕಿತ್ಸೆ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118(1)(ಸ್ವಯಂಪ್ರೇರಣೆಯಿಂದ ಅಪಾಯಕಾರಿ ಆಯುಧದಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರೆಗೆ ಆಪಾದಿತ ಮಹಿಳೆಯ ಬಂಧನವಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.