HEALTH TIPS

ನ್ಯಾಯಮೂರ್ತಿ ಹೇಮಾ ಸಮಿತಿ ವರದಿಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್: ಸಾರ್ವಜನಿಕ ಹಿತಾಸಕ್ತಿ ವಿಷಯ ಎಂದು ವಿವರಣೆ

               ಕೊಚ್ಚಿ: ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ನ್ಯಾಯಮೂರ್ತಿ ಹೇಮಾ ಸಮಿತಿ ಸಲ್ಲಿಸಿದ್ದ ವರದಿಯನ್ನು ಬಿಡುಗಡೆ ಮಾಡದಂತೆ ನೀಡಿರುವ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ವಿ.ಜಿ. ಅರುಣ್ ಅವರು ಈ ತಿಂಗಳು ಆರರವರೆಗೆ ವಿಸ್ತರಿಸಿದ್ದಾರೆ.

            ಖಾಸಗಿತನದ ಮೇಲೆ ಪರಿಣಾಮ ಬೀರುವ ಮತ್ತು ವರದಿಯಿಂದ ಪ್ರಭಾವಿತರಾದ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುವ ಭಾಗಗಳನ್ನು ತೆಗೆದುಹಾಕುವ ಮೂಲಕ ವರದಿಯನ್ನು ಬಿಡುಗಡೆ ಮಾಡಲು ರಾಜ್ಯ ಮಾಹಿತಿ ಹಕ್ಕು ಆಯೋಗವು ನಿರ್ದೇಶಿಸಿದೆ. ವರದಿಯನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗುತ್ತಿದ್ದಂತೆ, ಚಲನಚಿತ್ರ ನಿರ್ಮಾಪಕ ಸಜಿಮೋನ್ ಹೈಕೋರ್ಟ್ಗೆ ಮೊರೆ ಹೋದರು. ಆರಂಭದಲ್ಲಿ ನೀಡಲಾಗಿದ್ದ ತಡೆಯಾಜ್ಞೆಯನ್ನು ಇದೀಗ ಹೈಕೋರ್ಟ್ ಒಂದು ವಾರ ವಿಸ್ತರಿಸಿದೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಕ್ಕೆ ಸಂಬAಧಿಸಿದAತೆ ವ್ಯಕ್ತಿಯ ಅರ್ಜಿಯನ್ನು ಏಕೆ ತಡೆಹಿಡಿಯಬೇಕು ಎಂದು ನ್ಯಾಯಾಲಯ ಕೇಳಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries