HEALTH TIPS

ಭವಿಷ್ಯದಲ್ಲಿ ಗಂಡಸರೇ ಇರೋದಿಲ್ವಾ? ಕಣ್ಮರೆಯಾಗುತ್ತಂತೆ ವೈ ಕ್ರೋಮೋಸೋಮ್‌!!

  ಪುರುಷ ಅಥವಾ ಮಹಿಳೆ ಇಲ್ಲದೆ ಜೀವನವನ್ನು, ಸಮಾಜವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅಂಥದ್ದರಲ್ಲಿ ಭವಿಷ್ಯದಲ್ಲಿ ಗಂಡಸರೇ ಇರೋದಿಲ್ವಾ ಎಂಬ ಪ್ರಶ್ನೆ ಎದುರಾಗಿದೆ

ವೈ ಕ್ರೋಮೋಸೋಮ್‌ಗಳಲ್ಲಿ ಅಂದರೆ ವರ್ಣತಂತು ತ್ವರಿತವಾಗಿ ಕುಗ್ಗಿಹೋಗುತ್ತಿದೆ ಎಂಬ ಹೊಸ ಅಧ್ಯಯನವು ವಿಜ್ಞಾನಿಗಳನ್ನೇ ಆಶ್ಚರ್ಯಗೊಳಿಸಿದ್ದು, ಮುಂದೊಂದು ದಿನ ಗಂಡಸರೇ ಕಣ್ಮರೆಯಾಗಿಬಿಡುತ್ತಾರಾ ಎಂಬ ಚರ್ಚೆ ಶುರುವಾಗಿದೆ

ವಾಸ್ತವವಾಗಿ, ಎರಡು ವರ್ಷಗಳ ಹಿಂದೆ ನ್ಯಾಷನಲ್ ಅಕಾಡೆಮಿ ಆಫ್‌ ಸೈನ್ಸ್‌ನಲ್ಲಿ ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲಾಯಿತು. ಈ ಸಂಶೋಧನೆಯಲ್ಲಿ ಒಂದು ನಿರ್ದಿಷ್ಟ ಜಾತಿಯ ಇಲಿ (ಸ್ಪೈನಿ ರ್ಯಾಟ್) ಪುರುಷನಾಗಲು ನಿರ್ಧರಿಸುವ y ಕ್ರೋಮೋಸೋಮ್‌ನ ಜೀನ್ಸ್‌ನಲ್ಲಿ ಬದಲಾವಣೆ ಉಂಟಾಗಿರುವುದು ಪತ್ತೆಯಾಗಿರುವ ಬಗ್ಗೆ ಪ್ರಕಟಿಸಲಾಗಿದೆ. ಈ ಬದಲಾವಣೆಯಿಂದ ಹೊಸದೊಂದು ಜೀನ್ ಅಭಿವೃದ್ಧಿಗೊಂಡಿರುವ ಬಗ್ಗೆ ವಿವರಿಸಲಾಗಿದೆ.

ಪುರುಷರ ಬೆಳವಣಿಗೆಗೆ ಅಗತ್ಯವಾದ ವೈ ಕ್ರೋಮೋಸೋಮ್‌ನ ಜೀನ್ಸ್‌ ಸಂಖ್ಯೆಯಲ್ಲಿ ಕುಸಿತ ಉಂಟಾಗುತ್ತಿದ್ದು, ಭವಿಷ್ಯದಲ್ಲಿ ಈ ಕ್ರೋಮೋಸೋಮ್‌ ಕಣ್ಮರೆಯಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದು ಯಾವುದೋ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದ ಕಥೆಯಂತೆ ತೋರಿದರೂ ಇದು ನಿಜ. ವೈ ಕ್ರೋಮೋಸೋಮ್‌ ಕಣ್ಮರೆಯಾದರೆ ಮುಂದೆ ಹೆಣ್ಣು ಮಕ್ಕಳೇ ಹುಟ್ಟುತ್ತಾರೆ ಎಂಬ ದೊಡ್ಡ ಭಯವಿದೆ. ಪುರುಷರ XY ಕ್ರೋಮೋಸೋಮ್‌ಗಳು ಅವರ ದೇಹವನ್ನು ಪುರುಷನನ್ನಾಗಿ ಮಾಡುತ್ತವೆ. ಆದರೆ Y ಕ್ರೋಮೋಸೋಮ್‌ನ ಕಣ್ಮರೆಯು ಹೊಸ ಜಾತಿಯ ಮಾನವರನ್ನು ಸೃಷ್ಟಿಸಬಹುದೇ ಎಂಬ ಆತಂಕವನ್ನೂ ಹುಟ್ಟುಹಾಕುತ್ತದೆ.

ಆದರೆ ವೈ ಕ್ರೋಮೋಸೋಮ್‌ನ ಬದಲಾವಣೆಗೊಂಡು ಮತ್ತೊಂದು ಕ್ರೋಮೋಸೋಮ್‌ ಆಗಿ ಮಾರ್ಪಟ್ಟು ಇದೂ ಕೂಡಾ ಪುರುಷ ಲಿಂಗತ್ವವನ್ನು ನಿರ್ಧರಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹೀಗಾಗಿ ವೈ ವರ್ಣತಂತು ನಶಿಸಿಹೋಗದೇ ಮತ್ತೊಂದು ರೂಪ ಪಡೆದು ಪುರುಷರ ಹುಟ್ಟಿಗೆ ಕಾರಣವಾಗಬಹುದು ಎಂದು ವಿಜ್ಞಾನ ವಲಯ ಅಂದಾಜಿಸಿದೆ.

ವೈ ಕ್ರೋಮೋಸೋಮ್‌ನ ಪಾತ್ರವೇನು..?

ಮಾನವರಲ್ಲಿ ಹೆಣ್ಣು ಎರಡು X ವರ್ಣತಂತುಗಳನ್ನು ಹೊಂದಿದ್ದರೆ, ಪುರುಷರು ಒಂದು X ಮತ್ತು ಒಂದು Y ಕ್ರೋಮೋಸೋಮ್ ಹೊಂದಿರುತ್ತಾರೆ. Y ಕ್ರೋಮೋಸೋಮ್, X ಕ್ರೋಮೋಸೋಮ್‌ನ 900 ಗೆ ಹೋಲಿಸಿದರೆ ಕೇವಲ 55 ಜೀನ್‌ಗಳೊಂದಿಗೆ ಚಿಕ್ಕದಾಗಿದ್ದರೂ, ಭ್ರೂಣದಲ್ಲಿ ವೃಷಣದ ಬೆಳವಣಿಗೆಯ ಮೂಲಕ ಪುರುಷ ಲಿಂಗವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries