ಕೊಚ್ಚಿ: ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ತಾರಮ್ಯ ಧೋರಣೆಗಳಿದ್ದರೆ ಘಟನೆಯ ಬಗ್ಗೆ ಕೂಲಂಕಷÀವಾಗಿ ತನಿಖೆ ನಡೆಸಬೇಕು ಎಂದು ‘ಅಮ್ಮಾ’ದ ಜೊತೆ ಕಾರ್ಯದರ್ಶಿ ಸಿದ್ದೀಕ್ ತಿಳಿಸಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.
ಇದೊಂದು ಸೂಕ್ಷ್ಮ ವಿಚಾರ. ಯಾರು ಯಾರ ವಿರುದ್ಧ ದೂರು ನೀಡಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ. ಹಾಗಾಗಿ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದಿಕ್ ಮಾಹಿತಿ ನೀಡಿದರು. ಮಹಿಳೆಯರ ಮೇಲೆ ಹಲ್ಲೆ, ತಾರಮ್ಯ ನಡೆದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳೆಯರಿಗೆ ಬಟ್ಟೆ ಬದಲಿಸಲು ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ದೂರುಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮ್ಮದ ಸಹ ಕಾರ್ಯದರ್ಶಿ ಬಾಬುರಾಜ್ ಮಾತನಾಡಿ, ಹಿಂದೆ ಅದಕ್ಕೆ ಸೌಲಭ್ಯಗಳ ಕೊರತೆಯಿಂದ ಕಷ್ಟವಾಗುತ್ತಿತ್ತು, ಆದರೆ ಇಂದಿಗೂ ಮಹಿಳೆಯರಿಗೆ ಸೌಲಭ್ಯ ಕಲ್ಪಿಸದಿದ್ದರೆ ತಪ್ಪಾಗುತ್ತದೆ ಎಂದಿರುವರು.