HEALTH TIPS

ಮೂಡಂಬೈಲಿನಲ್ಲಿ ‘ಹೆಬ್ಬಾರ್ ಮಾಸ್ತರ್ ‘ ಸಂಸ್ಮರಣೆ ಹಾಗೂ ತಾಳಮದ್ದಳೆ

                ಮಂಜೇಶ್ವರ : ಯಕ್ಷಬಳಗ ಹೊಸಂಗಡಿ ಮಂಜೇಶ್ವರ ಸಂಘಟನೆಯ 34ನೇ ವರ್ಷದ ಕರ್ಕಾಟಕ ಮಾಸ ತಾಳಮದ್ದಳೆಕೂಟ ಸಮಾರೋಪ ಸಮಾರಂಭ ಇತ್ತೀಚೆಗೆ ಮೂಡಂಬೈಲು, ಅಪ್ಪತ್ತಿಮಾರ್ ಸುರೇಶ ಪದಕಣ್ಣಾಯರ ಮನೆ ನಾರಾಯಣೀಯಂನಲ್ಲಿ ಜರಗಿತು. ಈ ಸಂದರ್ಭ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಹಿರಿಯರನೆನಪು ಕಾರ್ಯಕ್ರಮ ಜರಗಿತು. ಹೆಬ್ಬಾರ್ ಮಾಸ್ತರ್ ಎಂದೇ ಜನಜನಿತರಾಗಿದ್ದ ಕೀರ್ತಿಶೇಷ ಮೀಯಪದವು ಕೃಷ್ಣರಾವ್ ಅವರ ನೆನಪನ್ನು  ಯೋಗೀಶ ರಾವ್ ಚಿಗುರುಪಾದೆ ನಡೆಸಿ ಕೊಟ್ಟರು. ಈ ಸಂದರ್ಭ ಮಾತನಾಡಿದ ಅವರು, ಹೆಬ್ಬಾರ್ ಮಾಸ್ತರ್ ಯಕ್ಷಗಾನ, ತಾಳಮದ್ದಳೆ, ಅಧ್ಯಾಪನ, ಜ್ಯೋತಿಷ್ಯ, ವಾಸ್ತು, ಜಲಶೋಧ ಹೀಗೆ ಬಹುಮುಖೀ ಪ್ರತಿಭೆಯನ್ನು ಹೊಂದಿದವರು. ಸ್ವ ಅದ್ಯಯನದಿಂದ ಹೆಚ್ಚಿನದನ್ನು ಸಾಧಿಸಿದವರು. ಐವತ್ತರ ದಶಕದಿಂದ ಮೂರು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಮಿಂಚಿದ ಶ್ರೀಯುತರು ಯಕ್ಷಗಾನ ನಾಟಕ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಯಕ್ಷಗಾನವಾಗಿ ಬದಲಾದ ಸಂಕ್ರಮಣ ಕಾಲದಲ್ಲಿ ಎರಡೂ ಪ್ರಕಾರಗಳಿಗೂ ಸಾಕ್ಷಿಯಾಗಿ ಎರಡು ತಲೆಮಾರುಗಳ ಕಲಾಕೊಂಡಿಯಾಗಿ ಸೇವೆಗೈದವರು. ಜನಾನುರಾಗಿಗಳಾಗಿ ಸದಾ ಜನಮನದಲ್ಲಿ ಉಳಿದವರು ಎಂದು ಅಭಿಪ್ರಾಯಪಟ್ಟರು. 

               ನಿವೃತ್ತ ಶಿಕ್ಷಕ  ಹೆಬ್ಬಾರ್ ಮಾಸ್ತರ್ ಅವರ ನಿಕಟವರ್ತಿ ಶಿವರಾಮ ಪದಕಣ್ಣಾಯ ಅಪ್ಪತ್ತಿಮಾರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ, ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ, ಹೆಬ್ಬಾರ್ ಮಾಸ್ತರ್ ಅವರ ಪುತ್ರ ರಾಜಾರಾಮ ರಾವ್ ಮೀಯಪದವು ಉಪಸ್ಥಿತರಿದ್ದರು.

             ಯಕ್ಷಬಳಗ ಸಂಚಾಲಕ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ,ನ್ಯಾಯವಾದಿ ವಿಠಲ ಭಟ್ ಮೊಗಸಾಲೆ ವಂದಿಸಿದರು. ನಾಗರಾಜ ಪದಕಣ್ಣಾಯ ಮೂಡಂಬೈಲು ನಿರೂಪಿಸಿದರು. ಬಳಿಕ ಯಕ್ಷಬಳಗ ಹೊಸಂಗಡಿ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಕರ್ಣಾರ್ಜುನ ಕಾಳಗ” ಪ್ರಸ್ತುತಿಗೊಂಡಿತು.  ಪ್ರಸಿದ್ಧ ಕಲಾವಿದರಾದ ಜಬ್ಬಾರ್ ಸಮೋ ಸಂಪಾಜೆ, ರಾಧಾಕೃಷ್ಣ ಕಲ್ಚಾರ್ ಅತಿಥಿ ಕಲಾವಿದರಾಗಿ ಕರ್ಣಾರ್ಜುನ ಪಾತ್ರಗಳಲ್ಲಿ ಮೇಳೈಸಿದರು.  ಹಿರಿಯ ಯಕ್ಷಗಾನ ಕಲಾವಿದ ಸಂಘಟಕ ಹರೀಶ್ಚಂದ್ರ ನಾಯ್ಗ ಮಾಡೂರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries