ನಾದಿಯಾ : ಇದೇ ಮೊದಲ ಬಾರಿಗೆ ಇಲ್ಲಿನ ಗೆಡೆ ಗಡಿ ಪೋಸ್ಟ್‌ನಲ್ಲಿ ಮಹಿಳಾ ತಂಡವೊಂದು ನೆರೆಯ ದೇಶದ ಮಹಿಳಾ ಸೈನಿಕ ತಂಡದೊಂದಿಗೆ ಸಿಹಿ ಹಂಚಿಕೊಳ್ಳುವ ಸಂಪ್ರದಾಯವನ್ನು ನೆರವೇರಿಸಿದೆ.
ಮೊದಲ ಬಾರಿಗೆ ಬಾಂಗ್ಲಾ ಸೈನಿಕರ ಜತೆ ಸಿಹಿ ಹಂಚಿಕೊಂಡ ಮಹಿಳಾ ಬಿಎಸ್‌ಎಫ್ ತಂಡ
0
ಆಗಸ್ಟ್ 16, 2024
Tags
ನಾದಿಯಾ : ಇದೇ ಮೊದಲ ಬಾರಿಗೆ ಇಲ್ಲಿನ ಗೆಡೆ ಗಡಿ ಪೋಸ್ಟ್‌ನಲ್ಲಿ ಮಹಿಳಾ ತಂಡವೊಂದು ನೆರೆಯ ದೇಶದ ಮಹಿಳಾ ಸೈನಿಕ ತಂಡದೊಂದಿಗೆ ಸಿಹಿ ಹಂಚಿಕೊಳ್ಳುವ ಸಂಪ್ರದಾಯವನ್ನು ನೆರವೇರಿಸಿದೆ.
ಸ್ವಾತಂತ್ರ್ಯೋತ್ಸದ ಈ ದಿನದಂದು ಭಾರತದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮಹಿಳಾ ತಂಡವು ಬಾಂಗ್ಲಾದೇಶದ ಗಡಿ ಭದ್ರತಾ ಮಹಿಳಾ ತಂಡದೊಂದಿಗೆ (ಬಿಜಿಬಿ) ಸಿಹಿ ಹಂಚಿಕೊಂಡರು.
ತಂಡದಲ್ಲಿ ಆರು ಮಹಿಳಾ ಕಾನ್‌ಸ್ಟೆಬಲ್‌ಗಳಿದ್ದರು. 'ಶುಭಾಶಯ ಹಂಚಿಕೊಳ್ಳುವುದು, ಸಿಹಿ ಹಂಚಿಕೊಳ್ಳುವುದು ಗಡಿಯನ್ನು ಕಾಯುವ ಎರಡೂ ದೇಶಗಳ ಸೈನಿಕರಿಗೆ ಪರಸ್ಪರರ ಕುರಿತು ಇರುವ ಗೌರವವನ್ನು ಸೂಚಿಸುತ್ತದೆ. ಇದೇ ಮೊದಲ ಬಾರಿಗೆ ಮಹಿಳಾ ತಂಡವೊಂದು ಈ ಸಂಪ್ರದಾಯವನ್ನು ನೆರವೇರಿಸಿದೆ' ಎಂದು ಕಮಾಂಡೆಂಟ್ ಸುಜೀತ್ ಕುಮಾರ್ ಸಂಸತ ಹಂಚಿಕೊಂಡರು.