ಮಧೂರು: ಅರ್ಜುನಗುಳಿ 'ಅರ್ಜುನ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್' ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕ್ಲಬ್ ಅಧ್ಯಕ್ಷ ಮಣಿಕಂಠನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅರವಿಂದಾಕ್ಷನ್ ಪಿಳ್ಳೆ ಧ್ವಜಾರೋಹಣ ನಡೆಸಿದರು. ಕ್ಲಬ್ ಕಾರ್ಯದರ್ಶಿ ವೆಂಕಪ್ಪ ನಾಯ್ಕ ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದರು. ಜಿಎಚ್‍ಎಸ್ ಪಟ್ಲ, ಚಿನ್ಮಯ ವಿದ್ಯಾಲಯ ಮತ್ತು ಚೈತನ್ಯ ವಿದ್ಯಾಲಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಶುಭ ಹಾರೈಕೆಯ ಭಾಷಣವನ್ನು ಶ್ರೀ ಸತೀಶನ ಅರ್ಜುನಗುಳಿ ಸುಭಾಷ್ ಅರ್ಜುನಗುಳಿ ನಡೆಸಿಕೊಟ್ಟರು. ಸತೀಶ ಪಾಂಡಿ ಸ್ವಾಗತಿಸಿದರು. ಸತೀಶ ಕೆ. ಅರ್ಜುನ ಗುಳಿ ವಂದಿಸಿದರು.