ಕಾಸರಗೋಡು: ನಗರದ ಸರ್ಕಾರಿ ಯುಪಿ ಶಾಲೆಯಲ್ಲಿ 3 ಲಕ್ಷ ರೂ.ವೆಚ್ಚದಲ್ಲಿ ಪಿಟಿಎ ವತಿಯಿಂದ ನಿರ್ಮಿಸಿರುವ ಮಕ್ಕಳ ಫಿಟ್ನೆಸ್ ಪಾರ್ಕನ್ನು ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಶೀದ್ ಪೂರಣಂ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ಕರಾಟೆ ತರಗತಿಯನ್ನು ಕಾಸರಗೋಡು ನಗರ ಪೊಲೀಸ್ ಠಾಣೆ ಎಸ್.ಐ ಸಜಿಮೋನ್ ಉದ್ಘಾಟಿಸಿದರು.
ಸಿಬ್ಬಂದಿ ಕಾರ್ಯದರ್ಶಿ ಎ ಶ್ರೀಕುಮಾರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ರಜನಿ, ನಗರಸಭಾ ಸದಸ್ಯೆ ಎಂ.ಶ್ರೀಲತಾ, ನಿವೃತ್ತ ಪ್ರಾಂಶುಪಾಲೆ ಟಿ.ಎನ್.ಜಯಶ್ರೀ, ಎಸ್‍ಎಂಸಿ ಅಧ್ಯಕ್ಷ ಕೆ.ಸಿ.ಲೈಜುಮೋನ್, ಪಿಟಿಎ ಉಪಾಧ್ಯಕ್ಷೆ ಕೆ.ಅಶ್ವತಿ, ಎಸ್‍ಆರ್‍ಜಿ ಸಂಚಾಲಕಿ ಎ.ಸುರೇಖಾ, ಶಾಲಾ ವಿದ್ಯಾರ್ಥಿ ಮುಖಂಡ ಸಚಿನ್ ಥಾಮಸ್ ಮಾತನಾಡಿದರು. ಪ್ರಾಂಶುಪಾಲೆ ಡಿ ವಿಮಲಾಕುಮಾರಿ ಸ್ವಾಗತಿಸಿದರು. ಟ್ಯಾಲೆಂಟ್ ಲ್ಯಾಬ್ ಸಂಯೋಜಕಿ ಸರ್ವಮಂಗಳ ರಾವ್ ವಂದಿಸಿದರು.