ಉಪ್ಪಳ: ಮುಳಿಂಜ ಜಿ.ಎಲ್.ಪಿ ಶಾಲೆಯಲ್ಲಿ ಹಿರೋಶಿಮಾ ನಾಗಸಾಕಿ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. 2ನೇ ಜಾಗತಿಕ ಯುದ್ಧದ ಭೀತಿಯನ್ನು ನೆನಪಿಸುವ ಜಗತ್ತನ್ನೇ ಸುಡಬಲ್ಲ ಅಣುಬಾಂಬಿನ ಪ್ರಖರತೆ ಜೀವಹಾನಿ ಹಾಗು ನಾಶನಷ್ಟಗಳ ಅರಿವು ಮೂಡಿಸಲು, ಜನರಲ್ಲಿ ಪ್ರೀತಿ ಭಾವನೆಯ ಶಾಂತಿಯನ್ನು ಕಾಪಾಡಿಕೊಂಡು ಯುದ್ಧದಿಂದ ಹೊರ ಉಳಿಯುವ ಸಂದೇಶ ನೀಡಲಾಯಿತು. ಇದಕ್ಕೆ ಪೂರಕವಾದ ವೀಡಿಯೊ ಪ್ರದರ್ಶಿಸಲಾಯಿತು.
ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ದಿನದ ಮಹತ್ವ ತಿಳಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಸುಬ್ಬಯ್ಯಕಟ್ಟೆ ಮತ್ತು ರಿಯಾಜ್ ಎಂ.ಎಸ್ ಮೆರವಣಿಗೆಗೆ ನೇತೃತ್ವ ವಹಿಸಿದ್ದರು. ಶಿಕ್ಷಕಿ ಕಾವ್ಯಾಂಜಲಿ ಮತ್ತು ಅನಿತಾರ ನೇತೃತ್ವದಲ್ಲಿ ತರಗತಿ ನಡೆಸಲಾಯಿತು.