ಕುಂಬಳೆ: ಕೇರಳ ಹೋಟೆಲ್ & ರೆಸ್ಟೊರೆಂಟ್-ಅಸೋಸಿಯೇಷನ್ ಕಾಸರಗೋಡು ಇವರ ಸಹಯೋಗದಲ್ಲಿ ಕುಂಬಳೆ ವ್ಯಾಪಾರಿ ಭವನದಲ್ಲಿ ಹೋಟೆಲ್‍ಗಳಲ್ಲಿ ಅಡುಗೆ ಮಾಡುವ ಅನ್ಯರಾಜ್ಯ ಕಾರ್ಮಿಕರಿಗೆ ಫಾಸ್ಟಾಕ್ ತರಬೇತಿ ತರಗತಿ ನಡೆಸಲಾಯಿತು. ಕಾರ್ಯಕ್ರಮವನ್ನು ಆಹಾರ ಸುರಕ್ಷತಾ ಅಧಿಕಾರಿ ಆದಿತ್ಯನ್ ಉದ್ಘಾಟಿಸಿದರು. ತರಬೇತುದಾರ ಕಾಮೇಶ್ ಸೇಲಂ ತರಗತಿ ನಡೆಸಿಕೊಟ್ಟರು.
ಸಂಘಟನೆಯ ಜಿಲ್ಲಾಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಮಮ್ಮು ಮುಬಾರಕ್ ಸ್ವಾಗತಿಸಿ, ಕುಂಬಳೆ ಘಟಕದ ಕಾರ್ಯದರ್ಶಿ ಸವಾದ್ ವಂದಿಸಿದರು. ಅಬ್ದುಲ್ಲಾ ತಾಜ್ ಮಾತನಾಡಿದರು.