ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿರುವ ವಿನೇಶಾ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.
ತೂಕ ಹೆಚ್ಚಳದಿಂದ ಅವರನ್ನು ಫೈನಲ್ ಪಂದ್ಯಕ್ಕೆ ಅನರ್ಹಗೊಳಿಸಲಾಗಿದೆ. ಅವರ ತೂಕದಲ್ಲಿ ಇಂದು ಬೆಳಿಗ್ಗೆ 100 ಗ್ರಾಂವರೆಗೆ ಹೆಚ್ಚಳವಾಗಿದೆ ಎಂದು ಇಂಡಿಯನ್ ಒಲಿಂಪಿಕ್ಸ್ ಅಸೊಶಿಯೆಷನ್ (IOA) ತಿಳಿಸಿದೆ.
ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್‌ನಲ್ಲಿ ವಿನೇಶಾ 5-0 ಯಿಂದ ಕ್ಯೂಬಾದ ಲೊಪೇಜ್ ವಿರುದ್ಧ ಗೆದ್ದಿದ್ದರು. ಚಿನ್ನ ಜಯಿಸುವ ಅವಕಾಶ ಈಗ ಅವರ ಮುಂದಿತ್ತು.
ವಿನೇಶಾ ಅವರು ಬುಧವಾರ ರಾತ್ರಿ ಫೈನಲ್‌ನಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರನ್ನು ಎದುರಿಸಬೇಕಿತ್ತು.
ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್‌ನಲ್ಲಿ ವಿನೇಶಾ 5-0 ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದಿದ್ದರು. ಚಿನ್ನ ಜಯಿಸುವ ಅವಕಾಶ ಈಗ ಅವರ ಮುಂದಿತ್ತು.
ಈ ಅನರ್ಹತೆಯಿಂದ ವಿನೇಶಾ ಅವರು ಪದಕ ವಂಚಿತರಾಗಿದ್ದಾರೆ. ಇದರಿಂದ ಕೋಟ್ಯಂತರ ಭಾರತೀಯರಿಗೆ ಆಘಾತವಾಗಿದೆ.
ವಿನೇಶಾ ಇಂದು (ಬುಧವಾರ ಬೆಳಿಗ್ಗೆ) 100 ಗ್ರಾಂ ಓವರ್‌ವೇಟ್ ಹೊಂದಿರುವುದು ಗೊತ್ತಾಯಿತು. ಇದರಿಂದ ಒಲಿಂಪಿಕ್ಸ್ ನಿಯಮಾವಳಿ ಪ್ರಕಾರ ಅವರಿಗೆ 50 ಕೆ.ಜಿ ವಿಭಾಗದ ಮಹಿಳೆ ಯರ ಕುಸ್ತಿಯ ಫೈನಲ್‌ನಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದು ಭಾರತ ಕುಸ್ತಿ ತಂಡದ ಕೋಚ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸ್ಪರ್ಧೆಯ ನಿಯಮದ ಪ್ರಕಾರ ಸೆಮಿಫೈನಲ್ ಹಾಗೂ ಫೈನಲ್ ನಡೆಯುವ ಎರಡು ದಿನ ನಿಗದಿತ 50 ಕೆ.ಜಿ ತೂಕವನ್ನು ಸ್ಪರ್ಧಾಳುಗಳು ಕಾಯ್ದುಕೊಳ್ಳಬೇಕು.
ವಿನೇಶಾ ಫೋಗಟ್ ಅವರು ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ಬರೆದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.