ನವದೆಹಲಿ: ವಂಚನೆಯ ಕರೆಗಳ ಬಲೆಗೆ ಬೀಳದಂತೆ ಟೆಲಿಕಾಂ ಕಂಪನಿಗಳ ನಿಯಂತ್ರಕ (ಟ್ರಾಯ್) ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಸೈಬರ್ ವಂಚಕರು ಇತ್ತೀಚೆಗೆ ಟೆಲಿಕಾಂ ಕಂಪನಿಗಳ ಹೆಸರಿನಲ್ಲಿ ಕರೆ ಮಾಡಿ ವೈಯಕ್ತಿಕ ಮಾಹಿತಿ ಕೇಳುತ್ತಿದ್ದಾರೆ.
ಟ್ರಾಯ್ ಹೆಸರಿನಲ್ಲಿ ಬರುವ ಕರೆಗಳಿಗೆ ಮರುಳಾಗಬೇಡಿ ಎಂದು ಕೇಳಿಕೊಂಡಿದ್ದು, ವೈಯಕ್ತಿಕ ಮಾಹಿತಿ ನೀಡದಿದ್ದರೆ ಮೊಬೈಲ್ ಸಂಖ್ಯೆ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಇಂತಹ ಸಂದೇಶಗಳು, ಇತರ ವಿಧಾನಗಳ ಮೂಲಕ ಅಥವಾ ಥರ್ಡ್ ಪಾರ್ಟಿ ಏಜೆನ್ಸಿ ಮೂಲಕ ಮೊಬೈಲ್ ಸಂಖ್ಯೆಯ ಸಂಪರ್ಕ ಕಡಿತದ ಬಗ್ಗೆ ಮಾಹಿತಿಯನ್ನು ಕಳುಹಿಸುತ್ತವೆ ಎಂದು ಟ್ರಾಯ್ ಸ್ಪಷ್ಟಪಡಿಸಿದೆ.
ಟ್ರಾಯ್ ಹೆಸರಿನಲ್ಲಿ ಬರುವ ಯಾವುದೇ ಸಂದೇಶ ಅಥವಾ ಕರೆ ಮೊಬೈಲ್ ಸಂಖ್ಯೆ ಕಡಿತಗೊಳ್ಳುತ್ತದೆ ಎಂದು ಹೇಳುವುದು ಖಂಡಿತವಾಗಿಯೂ ವಂಚನೆಯ ಯತ್ನವಾಗಿರುತ್ತದೆ. ಅಂತಹವರಿಗೆ ಪ್ರತಿಕ್ರಿಯಿಸಬಾರದು. ಟ್ರಾಯ್ ಹೆಸರಿನಲ್ಲಿ ವೈಯಕ್ತಿಕ ಮಾಹಿತಿಯನ್ನು ಕೇಳುವ ಕರೆ ಅಥವಾ ರೆಕಾರ್ಡ್ ಮಾಡಿದ ಕರೆ ಅಥವಾ ಎಸ್ಎಂಎಸ್ಗಳಿಗೆ ಜನರು ಸ್ಪಂದಿಸಬಾರದು ಎಂದು ಟ್ರಾಯ್ ಮನವಿ ಮಾಡಿದೆ.