ತಿರುವನಂತಪುರಂ: ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಕೇರಳದಲ್ಲಿ ಯುವ ವೈದ್ಯರು ಶುಕ್ರವಾರ ಒಪಿ ಮತ್ತು ವಾರ್ಡ್ ಡ್ಯೂಟಿಯನ್ನು ಬಹಿಷ್ಕರಿಸಿದ್ದಾರೆ.
ಕೇಂದ್ರ ರಕ್ಷಣಾ ಕಾಯಿದೆ ಜಾರಿಗೆ ಆಗ್ರಹಿಸಿ ಪಿಜಿ ವೈದ್ಯರು ಹಾಗೂ ಹಿರಿಯ ಹೌಸ್ ಸರ್ಜನ್ ವೈದ್ಯರು ಧರಣಿ ನಡೆಸಲಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು ಮತ್ತು ಯುವ ವೈದ್ಯರ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು 48 ಗಂಟೆಗಳ ಒಳಗೆ ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ. ಆದರೆ ತುರ್ತು ವಿಭಾಗಗಳು ಕಾರ್ಯನಿರ್ವಹಿಸಲಿವೆ. ಜಂಟಿ ಕ್ರಿಯಾ ವೇದಿಕೆಯ ಭಾಗವಾಗಿ ಕೇರಳದಲ್ಲಿ ಕೆಎಂಪಿಜಿಎ ಮುಷ್ಕರವನ್ನು ಘೋಷಿಸಲಾಯಿತು.
ಕೆಜಿಎಂಒಎ ಕೂಡಾ ಇಂದು ಕರಾಳ ದಿನ ಆಚರಿಸಲಿದೆ. ಶ್ರೀಚಿತ್ರ ವೈದ್ಯಕೀಯ ಸಂಸ್ಥೆಯ ಹೌಸ್ ಸರ್ಜನ್ ವೈದ್ಯರು ಕೂಡ ಮುಷ್ಕರದ ಭಾಗವಾಗಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಪ್ರತಿಭಟನಾ ಸಭೆಗಳನ್ನು ಆಯೋಜಿಸಲಾಗುವುದು ಎಂದು ಕೆಜಿಎಂಒಎ ತಿಳಿಸಿದೆ. ಐಎಂಎ ಕೂಡ ಹಿಂಸಾಚಾರವನ್ನು ಖಂಡಿಸಿದೆ. ಐಎಂಎ ತುರ್ತು ಸಭೆ ನಡೆಸಿ ಮುಂದಿನ ಮುಷ್ಕರ ಕಾರ್ಯಕ್ರಮಗಳನ್ನು ಘೋಷಿಸಲಿದೆ ಎಂದು ಹೇಳಿದೆ.