ಕಾಸರಗೋಡು: ಅಡ್ಕತ್ತಬೈಲ್ ಬಿಲಾಲ್ ಮಸೀದಿ ಸನಿಹದ ನಿವಾಸಿ, ಸಿ.ಎ. ಮಹಮ್ಮದ್ ಹಾಜಿ(56)ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಕೂಡ್ಲು ಗುಡ್ಡೆ ಟೆಂಪಲ್ ರಸ್ತೆ ನಿವಾಸಿ ಸಂತೋಷ್ ನಾಯ್ಕ್ ಯಾನೆ ಬಜೆ ಸಂತೋಷ್, ತಾಳಪಿಪಡ್ಪು ನಿವಾಸಿ ಶಿವಪ್ರಸಾದ್ ಯಾನೆ ಶಿವ, ಅಯ್ಯಪ್ಪನಗರ ನಿವಾಸಿ ಕೆ. ಅಜಿತ್‍ಕುಮಾರ್ ಯಾನೆ ಅಜು, ಅಡ್ಕತ್ತಬೈಲ್ ಉಸ್ಮನ್‍ನಗರ ಕ್ವಾಟ್ರಸ್ ನಿವಾಸಿ ಕೆ.ಜಿ ಕಿಶೋರ್‍ಕುಮಾರ್ ಯಾನೆ ಕಿಶೋರ್ ಶಿಕ್ಷೆಗೊಳಗಾದವರು. ನಾಲ್ಕೂ ಮಂದಿ ಆರೋಪಿಗಳಿಗೆ ತಲಾ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ. 2008 ಏ. 18ರಂದು ಬಿಲಾಲ್ ಮಸೀದಿ ಸನಿಹ ಸಿ.ಎ ಮಹಮ್ಮದ್ ಅವರನ್ನು ಪುತ್ರನ ಎದುರೇ ತಂಡ ಕಡಿದು ಕೊಲೆಗೈದಿರುವ ಬಗ್ಗೆ ಕೇಸು ದಾಖಲಾಗಿತ್ತು.