ಸುಕ್ಮಾ: ನಕ್ಸಲರು ಇಟ್ಟಿದ್ದ ನೆಲಬಾಂಬ್ ಸಿಡಿದು ದನ ಮೇಯಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆದಿದೆ.
ಸುಕ್ಮಾ: ನಕ್ಸಲರು ಇಟ್ಟಿದ್ದ ನೆಲಬಾಂಬ್ ಸಿಡಿದು ದನ ಮೇಯಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆದಿದೆ.
ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ದಬ್ಬಾಮರಕಾ ಎಂಬ ಹಳ್ಳಿ ಬಳಿ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಕಾವಾಸಿ ಸುಕ್ಕಿ ಎಂದು ಗುರುತಿಸಲಾಗಿದೆ. ನಕ್ಸಲರು ಇರಿಸಿದ್ದ ಸುಧಾರಿತ ಸ್ಪೋಟಕವನ್ನು ಆಕಸ್ಮಿಕವಾಗಿ ತುಳಿದು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಕ್ಸಲರು ಈ ಸ್ಫೋಟಕ ಇಟ್ಟಿದ್ದರು. ಕಳೆದ ಮೂರು ವರ್ಷಗಳಲ್ಲಿ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಇದೇ ರೀತಿ ಐವರು ನಾಗರಿಕರು ನಕ್ಸಲ್ ಬಾಂಬ್‌ಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.