ಬೇರೆಯವರು ಅಸೂಯೆಪಡುವಂತಹ ರೇಷ್ಮೆಯಂತಹ ಕೂದಲಿಗೆ ಅಲೋವೇರಾ ಜೆಲ್ ಹಚ್ಚುವ ಸುಲಭ ವಿಧಾನ ನೀವು ತಿಳಿಯಲೇಬೇಕು.
ಅಲೋವೆರಾ ನಮ್ಮ ಚರ್ಮದ ಜೊತೆಗೆ ನಮ್ಮ ಕೂದಲಿಗೂ ತುಂಬಾ ಪ್ರಯೋಜನಕಾರಿ.
ಅಲೋವೆರಾ ಮತ್ತು ತೆಂಗಿನ ಎಣ್ಣೆ
2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ನೀವು ಮನೆಯಲ್ಲೇ ತಯಾರಿಸಿ ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. 30-40 ನಿಮಿಷಗಳ ಕಾಲ ಬಿಟ್ಟು, ನಂತರ ಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.
ಅಲೋವೆರಾ ಮತ್ತು ನಿಂಬೆ ರಸ
ಒಂದು ಬಟ್ಟಲಿನಲ್ಲಿ 2 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಅಲೋವೆರಾ ಮತ್ತು ಮೊಸರು
2 ಚಮಚ ಅಲೋವೆರಾ ಜೆಲ್ ಮತ್ತು 2 ಚಮಚ ಮೊಸರನ್ನು ಸೇರಿಸಿ ನಯವಾಗುವವರೆಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಬಿಡಿ.
ಅಲೋವೆರಾ ಮತ್ತು ಆಲಿವ್ ಎಣ್ಣೆ
2 ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಇದನ್ನು 30-40 ನಿಮಿಷಗಳ ಕಾಲ ಬಿಡಿ.ಬಳಿಕ ತಲೆಗೆ ಸ್ನಾನ ಮಾಡಿ
ಅಲೋವೆರಾ ಮತ್ತು ಮೊಟ್ಟೆ
1 ಮೊಟ್ಟೆಯನ್ನು ಒಡೆದು ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಹೇರ್ ಮಾಸ್ಕ್ ಅನ್ನು 20-30 ನಿಮಿಷಗಳ ಕಾಲ ಬಿಡಿ. ತಣ್ಣೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.