HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗಮಕ ಶ್ರಾವಣ

                    ಬದಿಯಡ್ಕ: ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಕೇರಳ ಗಡಿನಾಡು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ "ಗಮಕ ಶ್ರಾವಣ" ಸಮಾರಂಭ ಜರಗಿತು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್  ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಜಯಪ್ರಕಾಶ ಪಜಿಲ ದೀಪ ಬೆಳಗಿಸಿ ಉದ್ಘಾಟಿಸಿ  ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅನಂತಕೃಷ್ಣ ಚಡಗ  ಭಾಗವಹಿಸಿ ಗಮಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಯುವಜನರ ಜವಾಬ್ದಾರಿಯನ್ನು ನೆನಪಿಸಿದರು.

               ಸಿರಿಗನ್ನಡ ವೇದಿಕೆಯ ಅಧ್ಯಕ್ಷ ವಿ.ಬಿ.ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿ  ಗಮಕ ಕಲೆಯ ಪ್ರಾಚೀನತೆಯನ್ನು ತಿಳಿಸುತ್ತಾ ಅದು ಬೆಳೆದು ಬಂದ ಬಗೆಯನ್ನು ಸೋದಾಹರಣವಾಗಿ ವಿವರಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಗಮಕ ಕಲಾ ಪರಿಷತ್ತು ಮಾಡಿದ ಸಾಧನೆಯ ಕುರಿತು ಮಾತನಾಡಿ ಆದಿ ಗಮಕಿಗಳಾದ ಕುಶ-ಲವರ ಜನ್ಮ ಮಾಸಾಚರಣೆಯ ಅಂಗವಾಗಿ ತಾವು ನಡೆಸಿಕೊಂಡು ಬರುತ್ತಿರುವ ಶ್ರಾವಣ ಮಾಸದ ಸರಣಿ ಗಮಕ ಕಾರ್ಯಕ್ರಮಗಳ ಔಚಿತ್ಯಗಳನ್ನೂ ತಿಳಿಸಿದರು. 

           ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದಾಯ್ದ ಭಾಗದ ವಾಚನವನ್ನು ಗಮಕಿ ಕೊಚ್ಚಿ ಗೋಪಾಲಕೃಷ್ಣ ಭಟ್ ನಿರ್ವಹಿಸಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರು ವ್ಯಾಖ್ಯಾನಗೈದರು. ವಿ.ಬಿ.ಕುಳಮರ್ವ ವಿರಚಿತ ಭಾಮಿನೀ ಷಟ್ಪದಿಯ "ಗಮಕ ಗೀತೆ" ಯನ್ನು ವಿದ್ಯಾರ್ಥಿನಿಯರು ಹಾಡಿದರು. ಡಾ. ಬೇ.ಸೀ. ಗೋಪಾಲಕೃಷ್ಣ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries