ಬದಿಯಡ್ಕ: ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನೀರ್ಚಾಲು ಇವರ ನೇತೃತ್ವದಲ್ಲಿ ಅಗ್ರಮಾನ್ಯ ಕಲಾವಿದರ ಕೂಡುವಿಕೆಯ ಯಕ್ಷಗಾನ ತಾಳಮದ್ದಳೆ ಭಾನುವಾರ (ಆ.25) ಅಪರಾಹ್ಣ 2 ರಿಂದ ನೀರ್ಚಾಲು ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸುವರು.
ಊರ್ವಶಿ ಶಾಪ, ಉತ್ತರನ ಪೌರುಷ ಕಥಾಭಾಗದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ ಮದ್ದಳೆಯಲ್ಲಿ ಗಣೇಶ್ ಭಟ್ ಬೆಳಾಲು, ಲಕ್ಷ್ಮೀಶ ಬೇಂಗ್ರೋಡಿ ಜೊತೆಗೂಡಲಿದ್ದಾರೆ. ಪ್ರಸಿದ್ಧ ಅರ್ಥದಾರಿಗಳಾದ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್, ಪವನ್ ಕಿರಣ್ಕೆರೆ, ಪಕಳಕುಂಜ ಶ್ಯಾಂ ಭಟ್, ವೈಕುಂಠ ಹೇರ್ಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರನಿರ್ವಹಣೆ ಮಾಡಲಿದ್ದಾರೆ. ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.