ಬದಿಯಡ್ಕ: ಕಾಸರಗೋಡು ಜಿಲ್ಲಾ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾಮಟ್ಟದ ಜೂನಿಯರ್ ತ್ರೋಬೋಲ್ ಚಾಂಪಿಯನ್ ಶಿಪ್ನಲ್ಲಿ ಹುಡುಗರ ವಿಭಾಗದಲ್ಲಿ ಎಸ್.ಎ.ಪಿ.ಎಚ್.ಎಸ್ ಅಗಲ್ಪಾಡಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.
ಪಂದ್ಯಾಟವನ್ನು ತ್ರೋಬೋಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಸೂರ್ಯನಾರಾಯಣ ಭಟ್ ಎಡನೀರು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕುಮಾರಿ ವಿದ್ಯಾಲಕ್ಷ್ಮಿ ಶುಭ ಹಾರೈಸಿದರು. ಕೆ ಸಂತೋಷ್ ಸ್ವಾಗತಿಸಿ, ಶಶಿಕಾಂತ್ ಜಿ. ಆರ್ ವಿಜೇತರಿಗಿರುವ ಬಹುಮಾನ ವಿತರಿಸಿದರು.