ಪೆರ್ಲ: ಕೇರಳ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ವತಿಯಿಂದ ಎಣ್ಮಕಜೆ ಗ್ರಾಮ ಪಂಚಾಯತಿ ಕುರೆಡ್ಕ ಧನ್ವಂತರಿ ಟ್ಯೂಶನ್ ಕೇಂದ್ರದ ಮಕ್ಕಳಿಗೆ ಹಾಗೂ ಪೋಷಕರಿಗೆ ಬೇ0ಗಪದವು ಅಂಗನವಾಡಿ ಆವರಣದಲ್ಲಿ ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನಾಚರಣೆಯ (ವಿಶ್ವ ಆದಿವಾಸಿ ದಿನ) ಬುಡಕಟ್ಟು ಸಪ್ತಾಹ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಗಿಡಗಳ ಹೆಸರು ಗುರುತಿಸುವ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.ಈ ಸಂದರ್ಭ ಈ ಪ್ರದೇಶದಿಂದ ಪಿ.ಎಸ್.ಸಿ ಮೂಲಕ ಪೋಲೀಸ್ ಅಧಿಕಾರಿಯಾಗಿ ಆಯ್ಕೆಯಾದ ಆದಿವಾಸಿ ಬುಡಕಟ್ಟು ಸಮುದಾಯದ ಹರಿಪ್ರಸಾದ್ ಪೆಲ್ತಾಜೆ ಅವರನ್ನು ಅಭಿನಂದಿಸಲಾಯಿತು.
ಗ್ರಾ.ಪಂ.ಸದಸ್ಯೆ ಸೌಧಾಭಿ ಹನೀಫ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೇಂಗಪದವು ಶಾಲಾ ಮುಖ್ಯಶಿಕ್ಷಕ ಶಿವಕುಮಾರ್ ಉಪಸ್ಥಿತರಿದ್ದು, ಪ್ರಕೃತಿ ಸಂರಕ್ಷಣೆ ಕುರಿತು ತರಗತಿ ನಡೆಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಸಭಾಧ್ಯಕ್ಷತೆ ವಹಿಸಿದ್ದÀ ಡಾ.ಕೇಶವ ನಾಯ್ಕ ಖಂಡಿಗೆ ವಿತರಿಸಿ ಮಕ್ಕಳಿಗೆ ಸ್ಫೂರ್ತಿಯ ನುಡಿಗಳನ್ನಾಡಿದರು. ಪೋಲಿಸ್ ಅಧಿಕಾರಿಯಾಗಿ ಆಯ್ಕೆಯಾದ ಹರಿಪ್ರಸಾದ್ ಅವರು ತನ್ನ ಅನುಭವಗಳನ್ನು ಹಂಚಿದರು.ಕಾರ್ಯಕ್ರಮದಲ್ಲಿ ಟ್ಯೂಶನ್ ಸೆಂಟರ್ ಫೆಸಿಲಿಟೇಟರ್ ಪ್ರಿಯ ಖಂಡಿಗೆ, ಜಯ ಬೇಂಗಪದವು, ಸುಬ್ರಹ್ಮಣ್ಯ ಪೆಲ್ತಾಜೆ, ಎಸ್.ಟಿ.ವಿಭಾಗದ ಪ್ರವರ್ತಕಿ ಜ್ಯೋತಿ, ಸಂಧ್ಯಾ, ಮಹೇಶ್, ಶೃತಿ, ಹಾಗು ಬೆಂಗಪದವು ಉನ್ನತಿ ವಾಸಿಗಳು ಸಹಕರಿಸಿದರು.ಅಶೋಕ ಸ್ವಾಗತಿಸಿ, ಜಯಲಕ್ಷ್ಮಿ ವಂದಿಸಿದರು.