ತಿರುವನಂತಪುರಂ: ಕೇರಳದ ವಯನಾಡು ದುರಂತದ ಸಂತ್ರಸ್ತರ ನೆರವಿಗೆ ಅನೇಕ ಸಿನಿನಟರು ಮುಂದೆಬರುತ್ತಿದ್ದಾರೆ. ಇದೀಗ ಖ್ಯಾತ ನಟ ಪ್ರಭಾಸ್ ಸಹ ತಮ್ಮ ಸಹಾಯವನ್ನು ನೀಡಿದ್ದಾರೆ. ಆದರೆ ಇದನ್ನು ಅವರು ಎಲ್ಲಿಯೂ ದೃಢಪಟಡಿಸಿಲ್ಲ.
ಪ್ರಭಾಸ್ ನಡತೆಯೇ ಹಾಗೆ. ಅವರು ಯಾರಿಗಾದರೂ ನೆರವು ನೀಡಿದರೆ ಬಹಿರಂಗಪಡಿಸುವುದಿಲ್ಲ. ಆದರೆ ಸಹಾಯ ಪಡೆದವರು ಹೇಳುವುದರಿಂದ ಮಾತ್ರ ಆ ವಿಷಯಗಳು ಹೊರಬರುತ್ತವೆ. ಇತ್ತೀಚೆಗಷ್ಟೇ ಪ್ರಭಾಸ್ ಅದೇ ರೀತಿ ಮಾಡಿದ್ದಾರೆ. ವಯನಾಡಿನ ಪರಿಹಾರ ಕಾರ್ಯಗಳಿಗಾಗಿ ಪ್ರಭಾಸ್ ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದಾರೆ.
ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಪ್ರಭಾಸ್ 2 ಕೋಟಿ ರೂ. ನೀಡಿದ್ದಾರೆ. ಇದನ್ನು ಪ್ರಭಾಸ್ ಟ್ರೆಂಡ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇಷ್ಟೆಲ್ಲಾ ಸಹಾಯ ಮಾಡಿದರೂ ಏನೂ ಹೇಳದ ಪ್ರಭಾಸ್ ಗೆ ನೆಟಿಜನ್ ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಯನಾಡಿಗಾಗಿ ಈಗಾಗಲೇ ಹಲವು ಟಾಲಿವುಡ್ ಹೀರೋಗಳು ದೇಣಿಗೆ ನೀಡಿದ್ದಾರೆ.
ದುರ್ಘಟನೆಗೆ ಮೊದಲು ಮನಮಿಡಿದಿದ್ದು ತೆಲುಗು ನಟ ಅಲ್ಲು ಅರ್ಜುನ್, ಆ ನಂತರ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್, ಇದೀಗ ಪ್ರಭಾಸ್ ಕೇರಳ ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂ. ಸಹಾಯ ಮಾಡಿದ್ದಾರೆ.
ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ 390 ಕ್ಕೂ ಹೆಚ್ಚು ಜನರು ಮೃತಪಟ್ಟು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ 150 ಮಂದಿ ನಾಪತ್ತೆಯಾಗಿದ್ದಾರೆ.