HEALTH TIPS

ಕಹಿಸತ್ಯ ಬಿಚ್ಚಿಟ್ಟಿದ್ದೇ ಇದಕ್ಕೆ ಕಾರಣವಾಯ್ತಾ? ಮತ್ತೊಂದು ಸ್ಫೋಟಕ ಸಂಗತಿ ಹಂಚಿಕೊಂಡ ಮಿನು ಮುನೀರ್​!

       ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಅನೇಕ ಸ್ಟಾರ್​ ನಟಿಯರು ತಮಗಾದ ಕಾಸ್ಟಿಂಗ್ ಕೌಚ್​ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ.

         ಒಬ್ಬರಲ್ಲ, ಇಬ್ಬರಲ್ಲ ಹಲವು ನಟಿಮಣಿಯರು ಚಿತ್ರರಂಗದ ಕಹಿಸತ್ಯವನ್ನು ಈಗಾಗಲೇ ಬಿಚ್ಚಿಟ್ಟಿದ್ದು, ಕಷ್ಟಕರ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಆಶ್ಚರ್ಯಕರ ಎಂದರೆ ಹೇಮಾ ವರದಿ ಹೊರಬಿದ್ದ ನಂತರ ಇಲ್ಲಿಯವರೆಗೆ ಲೈಂಗಿಕ ಕಿರುಕುಳ ಆರೋಪದಡಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 17. ಇನ್ನು ಇತ್ತೀಚೆಗಷ್ಟೇ ಈ ಅನುಭವ ನನಗೂ ಆಗಿದೆ ಎಂದು ಧ್ವನಿ ಎತ್ತಿದ್ದ ಮಲಯಾಳಂ ನಟಿ ಮಿನು ಮುನೀರ್​, ಇದೀಗ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರಿದ್ದಾರೆ.

ಮಿನು ಮುನೀರ್​ ಮಾಡಿದ ಆರೋಪವೇನು?

              'ನನಗೂ ಈ ಲೈಂಗಿಕ ಕಿರುಕುಳದ ಅನುಭವ ಆಗಿದೆ. ಮುಖೇಶ್​, ಮಣಿಯನಪಿಳ್ಳ ರಾಜು, ಇಡವೆಲ ಬಾಬು ಮತ್ತು ಜಯಸೂರ್ಯ ಸೇರಿದಂತೆ ಒಟ್ಟು ನಾಲ್ವರಿಂದ ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ. 2013ರಲ್ಲಿ ನಡೆದ ಚಿತ್ರವೊಂದರ ಚಿತ್ರೀಕರಣದಲ್ಲಿ ನಾನು ಶೌಚಾಯಲಯಕ್ಕೆ ಹೋಗಿ ಹೊರಗೆ ಬಂದ ತಕ್ಷಣ ಜಯಸೂರ್ಯ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡು, ಕಿಸ್​ ಮಾಡಿದ್ರು. ಅದೂ ನನ್ನ ಅನುಮತಿ ಇಲ್ಲದೆಯೇ. ಇದರಿಂದ ನನಗೆ ಭಾರೀ ಆಘಾತವಾಯಿತು. ಆ ಘಟನೆಯಿಂದ ಹೊರಬಾರದ ನನಗೆ ನೀನು ನನ್ನ ಜತೆಯಿದ್ದರೆ, ಖಂಡಿತ ಹೆಚ್ಚೆಚ್ಚು ಅವಕಾಶ ಕೊಡಿಸುತ್ತೇನೆ ಎಂದು ದೊಡ್ಡ ಆಫರ್ ಮುಂದಿಟ್ಟರು. ಇಂತಹ ಕಹಿ ಘಟನೆಗಳನ್ನು ನಾನು ಅನುಭವಿಸಿದ್ದೇನೆ. ಅಂದು ಎಲ್ಲಿಯೂ ಹೇಳಿಕೊಳ್ಳಲಾಗದೆ ಕಣ್ಣೀರಿಟ್ಟಿದ್ದೆ. ಮಲಯಾಳಂ ಚಿತ್ರರಂಗದಲ್ಲಿ ಈ ರೀತಿಯ ಸಾಕಷ್ಟು ಶೋಷಣೆಗಳು ನಡೆಯುತ್ತಿವೆ. ನಾನು ನಿಮ್ಮ ಮುಂದಿರುವ ಪ್ರತ್ಯಕ್ಷ ಸಾಕ್ಷಿ ಮತ್ತು ಬಲಿಪಶು' ಎಂದು ಬಹಿರಂಗವಾಗಿ ತಮಗಾದ ಅನುಭವವನ್ನು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಯಾರಿಗೂ ಹೆದರದೆ, ಬೆದರದೆ ಹೇಮಾ ಕಮಿಟಿ ವರದಿಯ ಆಧಾರವಾಗಿ ಮುಕ್ತವಾಗಿ ತಾವು ಚಿತ್ರರಂಗದಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಆನುಭವವನ್ನು ಹಂಚಿಕೊಂಡ ನಟಿ ಮಿನು ಮುನೀರ್​ಗೆ ಇದೀಗ ಬೆದರಿಕೆ ಕರೆಗಳು ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಬೆದರಿಕೆ ಸಂದೇಶಗಳು ವ್ಯಕ್ತವಾಗುತ್ತಿವೆ ಎಂದು ಹೇಳಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries