HEALTH TIPS

ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಯುವ ಸಂಘಟನೆಗಳು ಕೈಗೊಳ್ಳಬೇಕು; ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

              ಕಾಸರಗೋಡು:  ಯುವ ಸಂಘಟನೆಗಳು ಸಾರ್ವಜನಿಕ ಸ್ಥಳಗಳಾದ ಆಸ್ಪತ್ರೆ, ಬಸ್ ನಿಲ್ದಾಣಗಳನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹೇಳಿರುವರು. ಮಾಲಿನ್ಯಮುಕ್ತ ನವಕೇರಳ ಜನಪ್ರಿಯ ಅಭಿಯಾನದ ಅಂಗವಾಗಿ ಜಿಲ್ಲೆಯ ಯುವ ಸಂಘಟನೆಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

           ಯುವಕರ ಸಹಭಾಗಿತ್ವದಿಂದ ಸಾಮೂಹಿಕ ಸಹಭಾಗಿತ್ವ ಸಾಧ್ಯವಾಗಬೇಕು ಹಾಗೂ ಎಲ್ಲರೂ ಸ್ವಚ್ಛತಾ ರಾಯಭಾರಿಗಳಾಗಬೇಕು. ಯುವಕರ ಹಸಿರು ಕ್ರಿಯಾಸೇನಾ ಯುವಕರ ಕೂಟ 2.0 ಅಂಗವಾಗಿ ಎರಡು ದಿನಗಳ ಕಾಲ ವಾರ್ಡ್ ಮಟ್ಟದಲ್ಲಿ ಸೇನೆಯೊಂದಿಗೆ ಭಾಗವಹಿಸಬೇಕು. ಸೆ.10ರೊಳಗೆ ಸ್ವಚ್ಛತಾ ಸಭೆ ಆಯೋಜಿಸುವುದಾಗಿ ಬೇಬಿ ಬಾಲಕೃಷ್ಣನ್ ತಿಳಿಸಿದರು.

            ಅಕ್ಟೋಬರ್ ವೇಳೆಗೆ ವಾರ್ಡ್ ಮಟ್ಟದ ಸ್ವಚ್ಛತಾ ಅಭಿಯಾನವನ್ನೂ ಹಮ್ಮಿಕೊಳ್ಳಲಾಗುವುದು. ತ್ಯಾಜ್ಯ ಸಂಸ್ಕರಣಾ ಘಟಕ, ಎಫ್‍ಎಸ್‍ಟಿಪಿ ಸ್ಥಾಪನೆಗೆ ಜನರ ಸಹಕಾರ ಅಗತ್ಯವಿದ್ದು, ಯುವಕರು ಅಗತ್ಯ ಜಾಗೃತಿ ಮೂಡಿಸಬೇಕು ಎಂದರು.

          ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ಮುಕ್ತ ಸ್ಥಳವನ್ನು ಪತ್ತೆಮಾಡಿ ಅದನ್ನು ಹಸಿರು ಮತ್ತು ಸುಸ್ಥಿರಗೊಳಿಸುವ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುವುದು. ಸ್ಯಾನಿಟರಿ ಪ್ಯಾಡ್‍ಗೆ ಪರ್ಯಾಯವಾಗಿ ಮುಟ್ಟಿನ ಕಪ್ ಅನ್ನು ಬಳಸಬೇಕು. ಇದಕ್ಕಾಗಿ ಅಗತ್ಯ ಜಾಗೃತಿಯನ್ನೂ ಮೂಡಿಸಬೇಕು. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಗಮನಕ್ಕೆ ಬಂದರೆ ಪಂಚಾಯಿತಿ ಅಥವಾ ಜಾಗೃತ ದಳವನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದ್ದಾರೆ.

         ಡಿಪಿಸಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣ ವಿಷಯ ಮಂಡಿಸಿದರು. ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಜಯನ್, ಜಿಲ್ಲಾ ಅಭಿಯಾನ ಸಂಯೋಜಕ ಎಚ್.ಕೃಷ್ಣ ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries