ಕಾಸರಗೋಡು: ಕೇಂದ್ರ ಸರ್ಕಾರದ ಅಂಗಿಕೃತ ಸಂಘಟನೆಯಾದ 'ಯೋಗಾಸನ ಭಾರತ ' ಆಯೋಜಿಸಿದ ರಾಷ್ಟ ಮಟ್ಟದ ಯೋಗಾಸನ ಸ್ಪರ್ಧೆಗೆ ಯೋಗಪಟುಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಯೋಗಾಸನ ಕಾಸರಗೋಡು ಇವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಕಾಸರಗೋಡಿನ ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ನಡೆಸಲಾಯಿತು.
ಯೋಗಾಸನ ಕಾಸರಗೋಡು ಸಂಸ್ಥೆಯ ಅಧ್ಯಕ್ಷ ರವಿಶಂಕರ್ ನೆಗಲಗುಳಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಶಾಮೀಲ್ ಮೋನ್ ಕಳಂಗೋಟ್ ಉದ್ಘಾಟಿಸಿ 2036 ರ ಒಲಿಂಪಿಕ್ ಕ್ರೀಡೆಯಲ್ಲಿ ಯೋಗಾಸನಕ್ಕೂ ಪ್ರಾಧಾನ್ಯತೆ ಇರುವುದರಿಂದ ವಿದ್ಯಾರ್ಥಿಗಳೆಲ್ಲರೂ ಈಗಾಗಲೇ ಯೋಗವನ್ನು ಅಭ್ಯಾಸ ಮಾಡಿ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಯೋಗಾಸನ ಕಾಸರಗೋಡು ಸಂಸ್ಥೆಯು ಬಹಳ ಉತ್ಸುಕತೆಯಿಂದ ಯೋಗಪಟುಗಳನ್ನು ತಯಾರು ಮಾಡುವುದಲ್ಲದೆ ಅದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಯುಗಪುರುಷ ಶಾಲಾ ಸಮಿತಿ ಸದಸ್ಯ ಎ.ಪಿ ನಾಯ್ಕ್, ರೋಶಿತ ಪಿ. ಉಪಾಧ್ಯಕ್ಷ ಚಂದ್ರನ್ ಸಿ, ಸುಪ್ರಿಯಾ ಕೇಶವ್, ಶಾಂತೇರಿ ಕಾಮತ್, ಕವಿತಾ ಟೀಚರ್, ಶ್ರೀವಲ್ಲಿ ಮೊದಲಾದವರು ಶುಭಾಶಂಶನೆಗೈದರು. ಈ ಸಂದರ್ಭದಲ್ಲಿ ಹಿರಿಯ ದಾನಿ ಭಾರತಿ ಅಮ್ಮ ಮಾಧವ ರಾವ್ ರವರು ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಾಮಿಲ್ ಮೋನ್ ಅವರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಯೋಗಾಸನ ಕಾಸರಗೋಡು ಪ್ರಧಾನ ಕಾರ್ಯದರ್ಶಿ ತೇಜಕುಮಾರಿ ಸ್ವಾಗತಿಸಿ, ಲೆನಿನ್ ಅಶೋಕ್ ವಂದಿಸಿದರು. ಅಶ್ವತಿ ಪಿ ಕಾರ್ಯಕ್ರಮ ನಿರೂಪಿಸಿದರು. ಯುಗಪುರುಷ ನರೇಂದ್ರ ಮೋದಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.