ವಯನಾಡ್; ಭೂಕುಸಿತದಲ್ಲಿ ತಾಯಿ ಸಾವನ್ನಪ್ಪಿದ ಶಿಶುಗಳಿಗೆ ತಾಯಂದಿರು ಎದೆಹಾಲು ನೀಡಬಹುದು ಎಂಬ ಪೋಸ್ಟ್ ಅಡಿಯಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಯುವಕನನ್ನು ಬಂಧಿಸಲಾಗಿದೆ.
ಪಾಲಕ್ಕಾಡ್ ಚೆರ್ಪುಳಸ್ಸೆರಿ ಮೂಲದ ಸುಕೇಶ್ ಪಿ.ಮೋಹನ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಚೆರ್ಪುಳಸ್ಸೆರಿ ಪೋಲೀಸರ ಎಫ್‌ಐಆರ್‌ನಲ್ಲಿ ಯುವಕನ ಕೃತ್ಯ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಉಲ್ಲೇಖಿಸಲಾಗಿದೆ. ಪಾಲಕ್ಕಾಡ್ ಜಿಲ್ಲಾ ಪೋಲೀಸ್ ಮುಖ್ಯಸ್ಥರು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ಗಳ ಮೇಲೆ ಪೋಲೀಸರ ಕಟ್ಟುನಿಟ್ಟಿನ ನಿಗಾದಲ್ಲಿದ್ದಾರೆ ಮತ್ತು ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪುಟ್ಟ ಮಕ್ಕಳಿಗೆ ಎದೆಹಾಲು ಬೇಕಾದರೆ ದಯವಿಟ್ಟು ತಿಳಿಸಿ...ನನ್ನ ಹೆಂಡತಿ ರೆಡಿ' ಎಂಬ ವ್ಯಕ್ತಿಯೊಬ್ಬರು ಸತ್ಯಸಂದತೆಯಿAದ ಮಾಡಿದ ಪೋಸ್ಟ್ ಅಡಿಯಲ್ಲಿ ಸುಕೇಶ್ ಪಿ.ಮೋಹನ್ ಅಶ್ಲೀಲವಾಗಿ ಕಾಮೆಂಟ್ ಬರೆದಿದ್ದ.
ಇಂತಹ ಫೇಸ್ ಬುಕ್ ಪೋಸ್ಟ್ ಅಡಿಯಲ್ಲಿ ಕೆಟ್ಟ ಕಾಮೆಂಟ್ ಮಾಡಿದ ಮತ್ತೊಬ್ಬ ವ್ಯಕ್ತಿಯನ್ನು ಸ್ಥಳೀಯರು ಸುತ್ತುವರೆದು ಥಳಿಸಿದ್ದಾರೆ. ಕಣ್ಣೂರಿನ ಪೆರವೂರ್ ಬಳಿಯ ಎಡತೊಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ. ಕೆ.ಟಿ ಜಾರ್ಜ್ ಎಂಬಾತನಿಗೆ ಥಳಿಸಲಾಗಿದೆ.